ನವೋದಯ ಮತ್ತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ
ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಿಂದ 2021-22ನೇ ಸಾಲಿನ ನವೋದಯ ಶಾಲೆಗೆ 13 ವಿದ್ಯಾರ್ಥಿಗಳು ಮತ್ತು ಮೊರಾರ್ಜಿ ವಸತಿ ಶಾಲೆಗೆ ರಾಜ್ಯಕ್ಕೆ ಟಾಪ್10ರಲ್ಲಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ಮೂಡಲಗಿ ಕ್ಷೇತ್ರಶಿಕ್ಷಣಾಕಾರಿಗಳ ಕಾರ್ಯಾಲಯದಲ್ಲಿ ಸತ್ಕರಿಸಿ ಗೌರವಿಸಿದರು.
ಅತಿಥಿಗಳಾಗಿದ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಪರಿಶ್ರಮಪಟ್ಟು ಓದಿದರೆ ಎಲ್ಲವೂ ಸಾಧ್ಯವಾಗುತ್ತದೆ, ಶೃದ್ಧೆಯಿಂದ ಓದಿದಾಗ ಅದರ ಯಶಸ್ಸು ದೊರೆಯುತ್ತದೆ ಎಂದ ಅವರು 2009ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯದಿಂದ ನಾನು ಮೊದಲ ಸ್ಥಾನ ಪಡೆದುಕೊಂಡಿದು, ನನ್ನ ಬೆಳವಣಿಗೆಗೆ ಮೂಡಲಗಿ ಶೈಕ್ಷಣಿಕ ವಲಯದ ಶೈಕ್ಷಣಿ ಪರಿಸರ ಕಾರಣ ಎಂದರು.
ಮೂಡಲಗಿ ವಲಯ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದಾಗಿದೆ, ನವೋದಯ, ಮೊರಾರ್ಜಿ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾಗುವ ಮೂಲಕ ಅವರಲ್ಲಿ ಜ್ಞಾನ ವೃದ್ಧಿಯಾಗಿ ಉನ್ನತ ಸ್ಪರ್ಧೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬರುವುದು ಎಂದರು.
ಶಿಕ್ಷಕರ ಸಂಘದ ಆರ್.ಎಂ.ಮಹಾಲಿಂಗಪೂರ, ಅಡ್ವಿನ್ ಪರಸನ್ನವರ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿದರು.
ಸಮಾರಂಭದಲ್ಲಿ ನವೋದಯ ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಪ್ರಜ್ವಲ ತೋಟಗಿ, ಮುತ್ತುರಾಜ ಬಳಿಗಾರ, ಸಿದ್ಧಾರ್ಥ ಖಿಲಾರಿ, ಚನ್ನಮ್ಮಾ ಪಿ.ಎಸ್, ಮೇಘಾ ಬಂಬಲವಾಡ, ಸಂಗಮೇಶ ಖಾನಟ್ಟಿ, ಸುಶ್ಮೀತಾ ಹಣಜಿ, ವಂದನಾ ಯರಗಟ್ಟಿ, ವಿಜಯಲಕ್ಷ್ಮೀ ನಾಯ್ಕ, ಸೃಷ್ಠಿ ಬುದ್ನಿ, ವಿದ್ಯಾಶ್ರೀ ನಿಪ್ಪಾಣಿ, ಲಕ್ಷ್ಮೀ ಸೋನದ, ಉನ್ನತಿ ಕುಂಬಾರ ಮತ್ತು ವಿವಿಧ ವಸತಿ ಶಾಲೆಗಳ ಆರನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪ್ 10 ರಲ್ಲಿ ಬಂದ ವಿದ್ಯಾರ್ಥಿಗಳಾದ ಅರ್ಪಿತಾ ಕಬ್ಬೂರ, ಸೌಜನ್ಯಾ ಚುಳಕಿ, ವಿದ್ಯಾಶ್ರೀ ನಿಪ್ಪಾಣಿ, ದಾನಯ್ಯ ಹಿರೇಮಠ ಅವರನ್ನು ಸತ್ಕರಿಸಿ ಗೌರವಿಸಿದರು.
ಸಮಾರಂಭದ ವೇದಿಕೆಯಲ್ಲಿ ಪಾಂಡುರಂಗ ಒಂಟಿ, ಗೋಪಾಲ ಭಸ್ಮೇ, ಹಂಚಿನಾಳ, ನಾರಾಯಣ ನಿಪ್ಪಾಣಿ, ಸಿ.ಎಸ್.ಮೋಹಿತೆ, ಶಿವಾನಂದ ಸೋಮವ್ವಗೋಳ ಮತ್ತು ವಿವಿಧ ಶಾಲೆಗಳ ಮುಖ್ಯಸ್ಥರು, ವಿದ್ಯಾರ್ಥಿ ಪಾಲಕರು ಮತ್ತಿತರಿದ್ದರು.