ವಾಲ್ಮೀಕಿ ರಾಮಾಯಣ ಭಾರತೀಯರ ಜೀವನ ಚರಿತ್ರೆ ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ : ಮಲ್ಲಪ್ಪ ಜಾಡರ
ಮೂಡಲಗಿ : ವಾಲ್ಮೀಕಿ ರಾಮಾಯಣ ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕøತಿಯನ್ನು ಪರಿಚಯಸುತ್ತದೆ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿಯವರು ಮೂಲತಹ ಸಾಮಾನ್ಯ ನಾಗರಿಕನಾಗಿದ್ದು ಸಂಸಾರ ನಡೆಸಲು ಕೊಲೆ ದರೋಡೆ ಮತ್ತು ಜೀವ ಬೆದರಿಕೆಯಂತಹ ಕಾಯಕದಲ್ಲಿ ತೊಡಗಿದ್ದು ನಂತರ ನಾರದ ಮುನಿಗಳಿಂದ ಪಾಪ ಕಾರ್ಯದಿಂದ ಜೀವನಮುಕ್ತಿ ಸಿಗುವುದಿಲ್ಲವೆಂದು ಅರಿತು ದೇವರ ದ್ಯಾನದಿಂದ ಪಾಪ ಕರ್ಮಗಳಿಂದ ಪುಣ್ಯದ ಕರ್ಮ ದೊರೆಯುವುದನ್ನು ಮನಗಂಡು ಮನಃಪರಿವರ್ತನೆ ಮಾಡಿಕೊಂಡು ಮಹಾಕಾವ್ಯ ರಾಮಾಯಣ ರಚಿಸಿದರು ರಾಮಾಯಣ ಮಹಾಕಾವ್ಯವು ಭಾರತದ ಮುಖ್ಯಗ್ರಂಥವಾಗಿದ್ದು ರಾಮನ ತತ್ವಗಳು ಉತ್ತಮ ಸಮಾಜಕ್ಕೆ ಸ್ಪೂರ್ತಿ ನೀಡುತ್ತೇವೆ ಎಂದು ಮೂಡಲಗಿ ಆರ್.ಡಿ.ಎಸ್. ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಮಲ್ಲಪ್ಪ ಜಾಡರ ಹೇಳಿದರು.
ಅವರು ಸ್ಥಳೀಯ ಆರ್.ಡಿ.ಎಸ್. ಪಿಯು ಕಾಲೇಜು, ಪದವಿ ಕಾಲೇಜು ಮತ್ತು ಆಯ್.ಟಿ.ಆಯ್. ಎನ್. ಎಸ್.ಎಸ್. ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡುತ್ತಾ ವಾಲ್ಮೀಕಿ ರಾಮಾಯಣ ರಾಮರಾಜ್ಯದ ಸಿದ್ದಾಂತಗಳನ್ನು ರಾಜಕೀಯಕ್ಕೆ ನೀಡಿದರೆ ಉತ್ತಮ ಸಂಸಾರ ನಡೆಸಲು ರಾಮ ಸೀತೆಯ ಜೀವನ ಪರಿಚಯ ಮಾಡಿಕೊಡುತ್ತದೆ ರಾಮ ಲಕ್ಷ್ಮಣರ ಜೀವನ ಸಹೋದರತ್ವದ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಆಯ್.ಟಿ.ಆಯ್ ಕಾಲೇಜು ಪ್ರಾಚಾರ್ಯ ಸಿ.ಸಿ. ಶೆಟ್ಟರ ಮಾತನಾಡಿ ಇಂದಿನ ಸಮಾಜದಲ್ಲಿ ಸಮಾಜ ವಿರೋದಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು ರಾಮರಾಜ್ಯದ ಶ್ರೇಷ್ಟತೆಯನ್ನು ಇಂದಿನ ಜನಾಂಗದಲ್ಲಿ ವಾಲ್ಮೀಕಿಯ ಚಿಂತನೆಯಂತೆ ಬೆಳಸುವುದು ಅವಶ್ಯಕವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡಿದ್ದರು ಪ್ರಾಚಾರ್ಯರಾದ ಸಂಜೀವ ವಾಲಿ, ಸತ್ಯೇಪ್ಪ ಗೋಟೂರೆ ಮತ್ತಿತರರು ಹಾಜರಿದ್ದರು ಸಂಗಪ್ಪ ಕುಂಬಾರ ಸ್ವಾಗತಿಸಿ ನಿರೂಪಿಸಿದರು ಸುಭಾಸ ಮಾಲೋಜಿ ವಂದಿಸಿದರು.