ಮೂಡಲಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಲಗಿ ಘಟಕದವತಿಯಿಂದ ಬಹುದಿನಗಳ ಬೇಡಿಕೆಗಳಾದ ಎನ್.ಪಿ.ಎಸ ರದ್ದತಿ, ಪದವೀಧರ ಶಿಕ್ಷಕರ ಸಮಸ್ಯೆ, ಸಿ ಮತ್ತು ಆರ್, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಗುರುಗಳಿಗೆ 15,20,25 ವರ್ಷಗಳ ವೇತನ ಬಡ್ತಿ , ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ. ಇನ್ನೂ ಹಲವು ಶಿಕ್ಷಕರ ಬೇಕುಬೇಡಿಕೆಗಳ ಕುರಿತಾಗಿ ಶಿಕ್ಷಣ ಸಚಿವರಿಗೆ, ಆಯುಕ್ತರಿಗೆ ಹಾಗೂ ಪ್ರಧಾನ ಕಾಯದರ್ಶಿಗಳಿಗೆ ಮೂಡಲಗಿ ಬಿಇಒ ಅಜೀತ ಮನ್ನಿಕೇರಿಯವರ ಮುಖಾಂತರ ಮನವಿಸಲ್ಲಿಸಿದರು.
ಗುರುವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿನಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ಘಟಕದಿಂದ ಶಿಕ್ಷಕ ಸಮುದಾಯದ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕಪ್ಪು ಪಟ್ಟಿ ಧರಿಸಿ ಮನವಿಸಲ್ಲಿಸಿದರು. ಶಿಕ್ಷಕರ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕಳೆದ ಹಲವಾರು ವರ್ಷಗಳಿಂದ ಅದರಲ್ಲೂ ಕಳೆದ 3 ತಿಂಗಳ ಹಿಂದೆಯೇ ಈ ಕುರಿತು ಕಾಲಮಿತಿಯಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ತೀರ್ಮಾನ ಕೈಗೊಳ್ಳಲು ವಿನಂತಿಸಲಾಗಿತ್ತು, ಬೇಡಿಕೆಗಳು ಈಡೇರಿಸದಿದ್ದರೆ ಶಿಕ್ಷಕರ ಸಂಘಟನೆಯಿಂದ ಅನಿವಾರ್ಯವಾಗಿ ಹೋರಾಟಕ್ಕೆ ಹೋಗುವ ತೀರ್ಮಾನ ಕೈಗೊಳ್ಳಲಾಗಿತ್ತು. ವಿಶೇಷವಾಗಿ ಶಿಕ್ಷಕರ ಸಂಘಟನೆ ಮಕ್ಕಳೊಂದಿಗಿದ್ದು, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಸಹಕಾರ ಚಳುವಳಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಐತಿಹಾಸಿಕ ನಿರ್ಧಾರ ಮಾಡಿದ್ದು, ಮಕ್ಕಳೊಂದಿಗಿದ್ದು, ನಮ್ಮ ನಿರಂತರ ಹೋರಾಟದ ರೂಪರೇಷೆಗಳನ್ನು ತೀರ್ಮಾನಿಸಿದ್ದು, ಅದರಂತೆ ಹೋರಾಟಕ್ಕೆ ರಾಜ್ಯದ ಕಾರ್ಯಕಾರಿ ಸಮಿತಿಯಿಂದತೀರ್ಮಾನಿಸಿದ್ದಾರೆ.ಅ, 4 ರಿಂದ ತರಬೇತಿ ಬಹಿಷ್ಕಾರವನ್ನು ಮುಂದುವರೆಸುವದು, ಅ, 21 ರಿಂದ29 ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯುವುದು. ತರಬೇತಿ ಬಹಿಷ್ಕಾರ, ಕಪ್ಪು ಬಟ್ಟೆ ಧರಿಸಿ, ಶೈಕ್ಷಣಿಕ ಚಟುವಟಿಕೆ ನಿರ್ವಹಿಸಿದಾಗಲೂ ಸರ್ಕಾರ/ಇಲಾಖೆ ಸ್ಪಂದಿಸದಿದ್ದರೆ ನಿರಂತರ ಅಸಹಕಾರ ಚಳುವಳಿ ಮುಂದುವರೆಸುವದು. ಅ,30 ರಿಂದನಂ, 30 ರವರೆಗೆ ಮಧ್ಯಾಹ್ನದ ಬಿಸಿಯೂಟದ (ಒಆಒ) ಮಾಹಿತಿಯನ್ನು ನವಿಕರಣ ಮಾಡದೇ ನಮ್ಮ ಬೇಡಿಕೆಗಳ ಬಗ್ಗೆ ಅಸಹಕಾರ ವ್ಯಕ್ತಪಡಿಸುವುವದಾಗಿತಿಳಿಸಿದ್ದಾರೆ. ಶಿಕ್ಷಕರು ನಿರಂತರವಾಗಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದ ರೀತಿಯಲ್ಲಿ ಕಳೆದೆರಡು ತಿಂಗಳಿನಿಂದ ಮಾಡಿರುವ ಹೋರಾಟ ಕುರಿತು ಹಾಗೂ ಅಂತಿಮವಾಗಿ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು, ಈ ಹಂತದಲ್ಲೂ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಇನ್ನು ಉಗ್ರವಾದ ಹೋರಾಟಗಳಾದ ತರಗತಿ ಬಹಿಷ್ಕಾರ, ಶಾಲಾ ಬಹಿಷ್ಕಾರದಂತಹ ಅಂತಿಮ ಹೋರಾಟಕ್ಕೆ ಸಂಘಟನೆಯಿಂದ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಕಾರಣ ಸರ್ಕಾರ ಈ ಹಂತದ ಹೋರಾಟಕ್ಕೆ ಶಿಕ್ಷಕರನ್ನು ಬಿಡದೇ ನಮ್ಮ ಬೇಕು-ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕೆಂದು ಮನವಿಮೂಲಕ ಒತ್ತಾಯಿಸಿದ್ದಾರೆ.
ಈ ಸಂದಭದಲ್ಲಿ ಚಿಕ್ಕೊಡಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ರಾಮ ಲೋಕನ್ನವರ, ತಾಲೂಕಾ ಕಾಯದರ್ಶಿ ಎಡ್ವಿನ್ ಪರಸನ್ನವರ, ಸಂಘಟನೆಯ ಪದಾಧಿಕಾರಿಗಳಾದ ಬಿ.ಎಡಾಂಗೆ, ಆರ್. ಎಮ್.ಮಹಲಿಂಗಪೂರ, ಮಾಲತೇಶ ಸಣ್ಣಕ್ಕಿ, ಬಿ.ಬಿಕಿವಟಿ, ಎಮ್.ಜಿ.ಮಾವಿನಗಿಡದ, ವಾಯ್.ಡಿ.ಝಲ್ಲಿ, ಕೆ.ಎಲ್‍ಮೀಶಿ, ಎಸ್.ಎಮ್‍ದಬಾಡಿ, ಎಸ್.ಎ.ಕುರಣಗಿ ಹಾಗೂ ಎಸ್.ಎ.ದಡ್ಡಿಮನಿ, ಎಸ್.ಎಲ್.ಪಾಟೀಲ ಮತ್ತಿತರರು ಇದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …