36ನೇ ವಾರ್ಷಿಕ ಸರ್ವಸಾಧಾರಣ ಸಭೆ
ಮೂಡಲಗಿ: ಸಮೀಪದ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರ ಸಂಘದ 36ನೇ ವಾರ್ಷಿಕ ಸರ್ವಸಾಧಾರಣೆ ಸಭೆ ರವಿವಾರ ಅ.31 ರಂದು ಮುಂಜಾನೆ 11 ಗಂಟೆಗೆ ಸಮೀರವಾಡಿಯ ಕಬ್ಬು ಬೆಳಗಾರರ ಸಭಾ ಭವನದಲ್ಲಿ ಜರುಗಲಿದೆ.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಣ್ಣಗೌಡ ಪಾಟೀಲ ವಹಿಸುವರು, ಸಭೆಯಲ್ಲಿ ಕಾರ್ಯದರ್ಶಿ ರಂಗಣ್ಣಗೌಡ ಪಾಟೀಲ ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸುವರು, ಈ ಸಭೆಯಲ್ಲಿ 2020-21 ರ ಎರಡನೇ ಕಂತಿನ ಮತ್ತು 2021-22 ರ ಪ್ರಥಮ ಕಂತಿನ ವಿಷಯವನ್ನು ಚರ್ಚಿಸಲ್ಲಾಗುವುದು ಕಾರಣ ಕಬ್ಬು ಬೆಳೆಗಾರರು ಬಾಗವಹಿಸಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಬೇಕೆಂದು ಸಂಘದ ನಿರ್ದೇಶಕ ಲಕ್ಷ್ಮಣ ಹುಚರಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.