Breaking News
Home / Recent Posts / ಕನ್ನಡ ಭಾಷೆ ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ – ಜಿ.ಟಿ. ನರಗುಂದ

ಕನ್ನಡ ಭಾಷೆ ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ – ಜಿ.ಟಿ. ನರಗುಂದ

Spread the love

ಕನ್ನಡ ಭಾಷೆ ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ – ಜಿ.ಟಿ. ನರಗುಂದ

ಮೂಡಲಗಿ : ನಮ್ಮ ಕನ್ನಡ ನಾಡಿನ ಭಾಷೆ, ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ ಕನ್ನಡ ಭಾಷೆಗೆ ಐತಿಹಾಸಿಕ ಹಿನ್ನಲೆ ಇದೆ ಕನ್ನಡ ಭಾಷೆ ದಕ್ಷಿಣ ಭಾರತದಲ್ಲಿಯೇ ಅತಿ ಮಹತ್ವದ ಭಾಷೆಯಾಗಿದ್ದು ರಾಜಮಹಾರಾಜರ ಕಾಲದಿಂದ ಇಂದಿನವರೆಗೊ ಅಜರಾಮರವಾಗಿ ತನ್ನ ಸ್ಥಾನಮಾನವನ್ನು ಉಳಿಸಿಕೊಳ್ಳುತ್ತಾ ಬಂದಿದೆ ಇಂದು ಅನ್ಯದೇಶಿಯ ಭಾಷೆಗಳಿಂದ ಕನ್ನಡ ಭಾಷೆ ಮತ್ತು ನಾಡಿಗೆ ಸಂಚಕಾರ ಬರುತ್ತಿದೆ ನಾವೆಲ್ಲರೂ ನಮ್ಮ ಸಾಹಿತ್ಯಕಾರರೂ ನೀಡಿದ ಸಂದೇಶಗಳಂತೆ ಕನ್ನಡ ನಾಡನ್ನು ಕಟ್ಟೋಣ ಮತ್ತು ಬೆಳಸೋಣ  ಎಂದು ಮೂಡಲಗಿಯ  ಆರ್.ಡಿ.ಎಸ್. ಪಿಯು ಕಾಲೇಜಿನ  ಉಪನ್ಯಾಸಕ ಜಿ.ಟಿ. ನರಗುಂದ ಹೇಳಿದರು.

ಅವರು ಸ್ಥಳೀಯ ಆರ್.ಡಿ.ಎಸ್ ಪದವಿ ಮಹಾವಿದ್ಯಾಲಯ, ಪದವಿ ಪೂರ್ವ ಮಹಾವಿದ್ಯಾಲಯ ಆಯ್.ಟಿ.ಆಯ್  ಎನ್.ಎಸ್.ಎಸ್. ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ  ಮಾತನಾಡಿ ಕನ್ನಡವನ್ನು ಕಟ್ಟುವ ಕೆಲಸ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಕನ್ನಡದ ಆಸ್ತಿತ್ವಕ್ಕೆ ಆದ್ಯತೆ ನೀಡೋಣ  ಅದಕ್ಕಾಗಿ ನಮ್ಮ ಕರ್ನಾಟಕ ಸರಕಾರ ವಿದ್ಯಾರ್ಥಿಗಳಲ್ಲಿ ಕನ್ನಡದಲ್ಲಿ ಸಹಿ ಮಾಡುವುದು ಮತ್ತು ಕನ್ನಡ ಗೀತೆಗಳ ವಾಚನ ಮತ್ತು ಭಾಷಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಂಜೀವ ವಾಲಿ ಮಾತನಾಡಿ ಕನ್ನಡ ಭಾಷೆ ಮತ್ತು ಕರ್ನಾಟಕ ರಾಜ್ಯಕ್ಕೆ ತನ್ನದೇಯಾದ ಹಿರಿಮೆ ಮತ್ತು ಸ್ವಾಭಿಮಾನವಿದ್ದು ಕನ್ನಡಿಗರಾದ ನಾವೂ ನಮ್ಮ ಪೂರ್ವಜರು ಕನ್ನಡಕ್ಕಾಗಿ ನೀಡಿದ ತ್ಯಾಗವನ್ನು ಸ್ಮರೀಸುತ್ತಾ ಕನ್ನಡದ ಸಂರಕ್ಷಣೆಗೆ ಆಧ್ಯತೆ ನೀಡೋಣ ಎಂದರು

ಪದವಿ ಕಾಲೇಜಿನ ಪ್ರಾಚಾರ್ಯ ಸತ್ಯೆಪ್ಪ ಗೋಟೂರ ಮಾತನಾಡಿ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಮಹತ್ವದಾಗಿದ್ದು ಕನ್ನಡ ನಾಡಿನ ಹಿರಿಮೆ ಎತ್ತಿಹಿಡಿಯುವ ಕಾರ್ಯವನ್ನು ನಾವುಗಳು ಸ್ವಯಂತನದಿಂದ ಮಾಡೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಆಯ್.ಟಿ.ಆಯ್ ಕಾಲೇಜು ಪ್ರಾಚಾರ್ಯ ಚಿದಾನಂದ ಶೆಟ್ಟರ ಹಾಗೂ ಉಪನ್ಯಾಸಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಜಿ.ಎಸ್. ಮನ್ನಾಪೂರ ಸ್ವಾಗತಿಸಿದರು ಮಹಾದೇವ ಸಿದ್ನಾಳ ನಿರೂಪಿಸಿದರು ಸುಭಾಸ ಮಾಲೋಜಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ