ಮೂಡಲಗಿಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸಸಿಗಳನ್ನು ನೆಟ್ಟು ಕರ್ನಾಟಕ ರಾಜ್ಯೋತ್ಸವ ಆಚರಣೆ.
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ: ಸಸಿ ನೆಟ್ಟು ರಾಜ್ಯೋತ್ಸವ ಆಚರಣೆ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಹಯೋಗದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ‘ಕನ್ನಡದ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು. ಪ್ರಾಚೀನ ಭಾಷೆ ಕನ್ನಡವು ಇಡೀ ಭಾರತದ ಪರಂಪರೆಯ ಪ್ರತೀಕವಾಗಿದೆ’ ಎಂದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ವಿವಿಧ ಸಮಾಜ ಸೇವೆಯೊಂದಿಗೆ ಸಸಿಗಳನ್ನು ನೆಟ್ಟು ಬೆಳೆಸುವ ಅಭಿಯಾನವನ್ನು ನಿರಂತವಾಗಿ ನಡೆಸಿಕೊಂಡು ಬಂದಿದೆ. ಕಳೆದ ಆರು ವರ್ಷಗಳಲ್ಲಿ ಲಯನ್ಸ್ ಕ್ಲಬ್‍ದಿಂದ ಎರಡು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ’ ಎಂದರು.
ಲಯನ್ಸ್ ಕ್ಲಬ್ ಸದಸ್ಯ ಡಾ. ಎಸ್.ಎಸ್. ಪಾಟೀಲ, ಸಾರಿಗೆ ಇಲಾಖೆಯ ಬಸ್ ನಿಲ್ದಾಣ ಮೇಲ್ವಿಚಾರಕರಾದ ಎಚ್.ಬಿ. ಭಜಂತ್ರಿ, ಎಚ್.ಜಿ. ದೇಸಾರಟ್ಟಿ, ಹೆಸ್ಕಾಂದ ಮೆಹಬೂಬ್ ಶೇಖಬಡೆ, ಎಸ್.ಎಂ. ಪಾಟೀಲ, ಎನ್.ಪಿ. ಬಂಗೆನ್ನವರ, ಸೈಫನ್‍ಸಾಬ ಜಾತಿಗಾರ ಇದ್ದರು.