ಮುಂಬೈನಿಂದ ಆಗಮಿಸಿದ್ದ ಬೆಳಗಾವಿಯ ಸದಾಶಿವನಗರದ ಗರ್ಭಿಣಿ ಮಹಿಳೆ ಓರ್ವರಿಗೆ ಕೊರೊನಾ ಸೋಂಕು ತಗುಲಿದೆ.
ಹೌದು ಕೆಲ ದಿನಗಳ ಹಿಂದೆ ಬೆಳಗಾವಿಯ ಸದಾಶಿವ ನಗರದ ಈ ಗರ್ಭಿಣಿ ಮಹಿಳೆ ಮುಂಬೈಗೆ ಹೋಗಿದ್ದರು. ಬಳಿಕ ಮೊನ್ನೆಯಷ್ಟೇ ಬೆಳಗಾವಿಗೆ ಆಗಮಿಸಿದ್ದ ಈ ಗರ್ಭಿಣಿ ಮಹಿಳೆ ಬಿಮ್ಸ್‍ನಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಮಹಿಳೆಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳಿಸಿದಾಗ ಕೊರೊನಾ ಸೋಂಕು ತಗುಲಿರುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನುಗರ್ಭಿಣಿ ಮಹಿಳೆಯ ಟ್ರಾವೆಲ್ ಹಿಸ್ಟರಿ ಪತ್ತೆ ಕಾರ್ಯವನ್ನು ಜಿಲ್ಲಾಡಳಿತ ಈಗಾಗಲೇ ಮಾಡುತ್ತಿದ್ದು. ಸದಾಶಿವನಗರವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಜಿಲ್ಲಾಡಳಿತ ಘೋಷಿಸುವ ಸಾಧ್ಯತೆಯಿದೆ.
IN MUDALGI Latest Kannada News