ಸಂಗಮೇಶ ಹೂಗಾರ ಅವರಿಗೆ ಪಿಎಚ್.ಡಿ.: ಬಸವೇಶ್ವರ ಸಂಸ್ಥೆಯಿಂದ ಸನ್ಮಾನ
ಮೂಡಲಗಿ : ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಜ್ಞಾನಾರ್ಜನೆ ಮಾಡುತ್ತಾ ತಮ್ಮ ಕಾಯಕದಲ್ಲಿ ಕೈಲಾಸವನ್ನೆ ಸೃಷ್ಠಿಮಾಡಿಕೊಂಡು ನಿರಂತರ ಅಭ್ಯಾಸದಲ್ಲಿ ತೊಡಗಿ ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿರುವ ಪ್ರೊ. ಸಂಗಮೇಶ ಹೂಗಾರ ಅವರದು ಅಪೂರ್ವ ಸಾಧನೆಯಾಗಿದೆ’ ಎಂದು ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಮೇಶ ಬೆಳಕೂಡ ಹೇಳಿದರು,
ಶನಿವಾರ ಸಮೀಪದ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆವರಣದಲ್ಲಿ ಅದೆ ಸಂಸ್ಥೆಯ ಪಿ ಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕ ಸಂಗಮೇಶ ಹೂಗಾರ ಅವರಿಗೆ ಪಿಎಚ್.ಡಿ. ಪದವಿ ದೊರೆತಿರುವುದಕ್ಕೆ ಸನ್ಮಾನಿಸಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಡಾ ಭೋಜರಾಜ ಬೆಳಕೂಡ ಮಾತನಾಡಿ, ಡಾ ಎಸ್ ಎಸ್ ಹೂಗಾರ ಅವರು “ಉತ್ತರ ಕರ್ನಾಟಕ ಕಂಪನಿ ನಾಟಕಗಳಲ್ಲಿ ಸಮಾನತೆಯ ಆಶಯ” ಎಂಬ ವಿಷಯದಲ್ಲಿ ಮಂಡಿಸಿರುವ ಪ್ರಭಂದಕ್ಕೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿಧ್ಯಾಲಯವು ಪಿಎಚ್.ಡಿ. ಪ್ರದಾನ ಮಾಡಿದೆ ಎಂದರು.