Breaking News
Home / Recent Posts / ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕು- ಸಿದ್ದಣ್ಣ ದುರದುಂಡಿ

ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕು- ಸಿದ್ದಣ್ಣ ದುರದುಂಡಿ

Spread the love

ಸವದತ್ತಿ ತಾಲೂಕ ಯುವ ಸಂಘಗಳ ಒಕ್ಕೂಟದ ಪ್ರಥಮ ವಾರ್ಷಿಕ ಸಭೆ ಹಾಗೂ ಯುವ ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಹೇಳಿದರು.

ಯರಗಟ್ಟಿ ಪ್ರವಾಸಿ ಮಂದಿರದಲ್ಲಿ ಸವದತ್ತಿ ತಾಲೂಕ ಯುವ ಸಂಘಗಳ ಒಕ್ಕೂಟದ ಪ್ರಥಮ ವಾರ್ಷಿಕ ಸಭೆಯನ್ನು ಗಿಡ ನೆಟ್ಟು ನೀರುನಿಸುವ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡಿ ಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಯುವ ಸಮಾವೇಶ ಹಾಗೂ ಯುವ

ಕಲಾವಿದರಿಗೆ ಮತ್ತು ಸಾಧಕರಿಗೆ ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ಯುವ ಪ್ರಶಸ್ತಿ ಪ್ರಧಾನ ಮಾಡಲಾಗುವದು. ಯುವಕರಿಗೆ ಇರುವಂತ ಯೋಜನೆಗಳು ಹಾಗೂ ಯುವಜನ ಮೇಳ ಯುವ ಸಮ್ಮೇಳನ ಕಾರ್ಯಾಗಾರ ಕಾರ್ಯಕ್ರಮಗಳನ್ನು ಪ್ರಾರಂಬಿಸಲು ಇಲಾಖೆಗಳಿಗೆ ಮನವಿ

ಮಾಡಲಾಗುವದು. ಸ್ವಾಮಿ ವಿವೇಕಾಂದರು ತತ್ವ ಸಿದ್ದಾಂತಗಳನ್ನು ಯುವಕರು ರೂಡಿಸಿಕೋಳಬೇಕು ಮತ್ತು ಹೊಸ ಹೊಸ ಸಂಘಗಳನ್ನು ರಚನೆ ಮಾಡಲಾಗುವದು ನಿಷ್ಕ್ರೀಯಗೋಂಡಿರುವ ಸಂಘಗಳನ್ನು ಬಲರ್ವಧನೆ ಮಾಡಲು ಯುವಕರು ಕಂಕಣಬದ್ದರಾಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸವದತ್ತಿ ತಾಲೂಕಧ್ಯಕ್ಷ ಮಹಾದೇವ ಮುರಗೋಡ ಮಾತನಾಡಿ ಒಕ್ಕೂಟದ ಸ್ಥಳಿಯ ಪದಾಧಿಕಾರಿಗಳು ರಾಜಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಯುವ ಜನರ ಸಂಘಟನೆಯನ್ನು ನಮ್ಮ ತಾಲೂಕಿನಲ್ಲಿ ಉತ್ತಮವಾಗಿ ಮಾಡುತ್ತಿದ್ದೆವೆ. ಗ್ರಾಮಿಣ ಕ್ರೀಡೆಗಳು ಜಾನಪದ ಕಲೆ ಯುವಜನ ಮೇಳ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಹೇಳಿದರು. ಜಾನಪದ ಯುವ ಕಲಾವಿದ ಯಲ್ಲಪ್ಪಾ ನಾಯಕರ್ ಮಾತನಾಡಿ ಯುವ ಜನರು ಒಂದಾಗಿ ಕಾರ್ಯಕ್ರಮಳನ್ನು ಮಾಡಬೆಕು ನಮ್ಮ

ತಾಲೂಕಿನಲ್ಲಿ ಸಂಘಟನೆ ಮಾಡಲು ಜಿಲ್ಲಾ ಒಕ್ಕೂಟಕ್ಕೆ ನಿರಂತರ ಬೆಂಬಲವಾಗಿ ಇರುತ್ತೆವೆ ಎಂದು ಹೇಳಿದರು. ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸೋಮಪ್ಪಾ ಪೂಜೇರಿ ಗೋಕಾಕ ತಾಲೂಕ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಬಾಲಚಂದ್ರ ಬನವಿ ಬೆಳಗಾವಿ ಯುವ ಕಲಾವಿದೆ ರಾಜಶ್ರೀ ಕಾಂಬಳೆ ಲಕ್ಷ್ಮೀಬಾಯಿ ಮಾದರ ಹಾಗೂ ಎಲ್ಲಾ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. ಯುವ ಕಲಾವಿದೆ ಅಕ್ಕಮಹಾದೇವಿ ಮಾದರ ಸ್ವಾಗತಿಸಿ ವಂದಿಸಿದರು. ಯುವ ಸಂಘಟಕ ಬಸು ತಾವಲಗೇರಿ ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ