ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು-ಸಂಸದ ಈರಣ್ಣ ಕಡಾಡಿ
ಮೂಡಲಗಿ: ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ ಅಭಿಮಾನ ಇರಬೇಕು, ಕನ್ನಡ ಭಾಷೆಯಿಂದಾಗಿ ನಾಡಿನ ಹಿರಿಮೆ ಹೆಚ್ಚಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ನ.21 ರಂದು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ರಾಜ್ಯ, ಜಿಲ್ಲಾ ಅಧ್ಯಕ್ಷರ ಸ್ಥಾನದ ಚುನಾವಣೆ ನಿಮಿತ್ಯ ಮೂಡಲಗಿ ತಹಶೀಲ್ಧಾರ ಕಛೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಕನ್ನಡ ನಾಡು, ನುಡಿಯ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಅವರು ಈ ನಾಡಿನ ಪ್ರತಿಯೊಬ್ಬರು ಕನ್ನಡ ಉಳಿಸಿ, ಬೆಳೆಸಬೇಕೆಂದರು.
ನಮ್ಮ ಭಾಷೆ ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ದಿನನಿತ್ಯ ಕನ್ನಡ ಬಳಕೆ ಮಾಡುವ ಮೂಲಕ ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು. ದಿನಂಪ್ರತಿ ಕನ್ನಡ ಭಾಷೆಯನ್ನು ಬಳಸಬೇಕೆಂದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ, ಮಕ್ಕಳ ಸಾಹಿತಿ . ಸಂಗಮೇಶ ಗುಜಗೊಂಡ, ಪತ್ರಕರ್ತರಾದ ಶಿವಾನಂದ ಮುಧೋಳ, ನಿಂಗಪ್ಪ ಗಾಡವಿ, ಕೆ.ಬಿ ಗಿರೆಣ್ಣವರ, ಪ್ರಮುಖರಾದ ಪ್ರಕಾಶ ಸೋನವಾಲ್ಕರ, ಪ್ರಕಾಶ ಮಾದರ, ಡಾ. ತುಕಾರಾಮ ಉಮರಾಣಿ, ನ್ಯಾಯವಾದಿ ಶಂಕರ ಗೋರೋಶಿ, ಈಶ್ವರ ಮುರಗೋಡ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.