Breaking News
Home / Recent Posts / ಪೂಜಾರಿ, ಕವಟಗಿಮಠ ಗೆಲುವು ಪಕ್ಕಾ : ಹಣಮಂತ ನಿರಾಣಿ

ಪೂಜಾರಿ, ಕವಟಗಿಮಠ ಗೆಲುವು ಪಕ್ಕಾ : ಹಣಮಂತ ನಿರಾಣಿ

Spread the love

ಪೂಜಾರಿ, ಕವಟಗಿಮಠ ಗೆಲುವು ಪಕ್ಕಾ : ಹಣಮಂತ ನಿರಾಣಿ

ಮೂಡಲಗಿ : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಸ್ಫರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಎಚ್ ಪೂಜಾರ ಹಾಗೂ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಹಾಂತೇಶ ಕವಟಗಿಮಠ ಗೆಲುವು ಪಕ್ಕಾ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್ ನಿರಾಣಿ ಹೇಳಿದ್ದಾರೆ.
ಪಿ.ಎಚ್ ಪೂಜಾರ ಅಖಂಡ ವಿಜಯಪುರ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರು. ಈ ಭಾಗದಲ್ಲಿ ಬಿಜೆಪಿಯನ್ನು ಕಟ್ಟಿ ಪಕ್ಷದ ಪ್ರಭಾವವನ್ನು ಬೆಳೆಸಿದವರು. ಕವಟಗಿಮಠ ಅವರು ಕೂಡ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೆಳೆಸುವುದಕ್ಕೆ ಬಹಳ ಶ್ರಮಿಸಿದ್ದಾರೆ. ಅವರು ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳನ್ನು ಕಟ್ಟಿ ಚೆನ್ನಾಗಿ ನಡೆಸುತ್ತಿದ್ದಾರೆ. ಈ ಇಬ್ಬರು ನಾಯಕರು ವಿಧಾನ ಪರಿಷತ್ ಪ್ರವೇಶದಿಂದ ಈ ಭಾಗಕ್ಕೆ ಬಹಳಷ್ಟು ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಪಕ್ಷದ ಸರ್ವ ಸಮ್ಮತ ಅಬ್ಯರ್ಥಿಗಳಾಗಿದ್ದು ಬಹಳ ಜನಾನುರಾಗಿಗಳಾಗಿದ್ದಾರೆ ಎಂದೂ ನಿರಾಣಿ ಹೇಳಿದ್ದಾರೆ.
ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ 15 ಬಿ.ಜೆ.ಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಪರಿಷತ್‍ನಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ