ಯುವ ಕಲಾವಿದ ಸಿದ್ದಣ್ಣ ದುರದುಂಡಿಯವರಿಗೆ ರಾಜ್ಯ ಮಟ್ಟದ ಕಲಾ ಸಿರಿ ಪ್ರಶಸ್ತಿ ಪ್ರಧಾನ .
ಹಳ್ಳೂರ: ಗ್ರಾಮದ ಸಮಾಜ ಸೇವಕರು ಹಾಗೂ ಮಹಾಲಕ್ಷ್ಮೀದೇವಿ ಡೊಳ್ಳು ಕುಣಿತ ಕಲಾ ಸಂಘದ ಕಾರ್ಯಾಧ್ಯಕ್ಷ ಸಿದ್ದಣ್ಣ ದುರದುಂಡಿ ಅವರ ಜಾನಪದ ಕಲಾ ಸೇವೆ ಡೊಳ್ಳು ಕುಣಿತ ಹೀಗೆ 15 ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಯುವ ಸಂಘಟನೆ ಮಾಡುತ್ತಾ ಬಂದಿರುವ ಸಿದ್ದಣ್ಣ ದುರದುಂಡಿ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕಲಾ ಸಿರಿ ಪ್ರಶಸ್ತಿ ಪ್ರಧಾನವನ್ನು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಡೆದ ಕನಕದಾಸ ಜಯಂತಿ ಹಾಗೂ ಕನ್ನಡ ರಾಜೋತ್ಸವದ ರಸಮಂಜರಿ ನಗೆಹಬ್ಬ ಹಾಗೂ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಿದ್ದಣ್ಣ ದುರದುಂಡಿ ಅವರು ಕನ್ನಡ ನಾಡು ನುಡಿಗಾಗಿ ಸಾಂಸ್ಕ್ರತಿಕ ಜಾನಪದ ಕಲೆ ಹಾಗೂ ಹಲವಾರು ಯುವ ಪ್ರತಿಭೆಗಳನ್ನು ಬೆಳೆಸಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಉದಯ ಚಿಕ್ಕಣ್ಣವರ ಉಪಾಧ್ಯಕ್ಷ ಸುಬಾನ ಮುಕಟಖಾನ ಹಾಗೂ ರಾಜ್ಯ ಸಂಚಾಲಕರಾದ ಮಹಾದೇವ ತಳವಾರ ಅಭಿನಂದನೆ ತಿಳಿಸಿದರು. ಯುವ ಸಂಘಗಳ ಒಕ್ಕೂಟದ ಸವದತ್ತಿ ತಾಲೂಕ ಅಧ್ಯಕ್ಷ ಮಹಾದೇವ ಮುರಗೋಡ ಯುವ ಕಲಾವಿದೆ ಶ್ರುತಿ ಜಾದವ ಅನೇಕ ಜಾನಪದ ಕಲಾವಿದರು ಕಾಮಿಡಿ ಕಿಲಾಡಿಗಳು ಯುವ ಪ್ರತಿಭೆಗಳು ಉಪಸ್ಥಿತರಿದ್ದರು.