ಡಿ.5ರಂದು ಮಲ್ಲಿಕಾರ್ಜುನ ದೇವಸ್ಥಾನ ಅಡಿಗಲ್ಲು, ಅಯ್ಯಪ್ಪಸ್ವಾಮಿ ಮಹಾಪೂಜೆ

ಮೂಡಲಗಿ: ಇಲ್ಲಿಯ ಮಾರ್ತಂಡ ಮಲ್ಲಯ್ಯ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಈರಣ್ಣ ದೇವಸ್ಥಾನದ ಹತ್ತಿರ ಇರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಅಗ್ನಿ ಮತ್ತು ಮಹಾಪೂಜೆ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಅಡಿಗಲ್ಲು ಸಮಾರಂಭವು 5ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.

ಡಿ. 5ರಂದು ಸಂಜೆ 6 ಗಂಟೆಗೆ ಜರುಗಲಿರುವ ಅಗ್ನಿಪೂಜೆ ಮತ್ತು ಮಹಾಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ಸವದತ್ತಿ ಗುಲಗಾಜಂಬಗಿಯ ಶಿವಲಿಂಗ ಸ್ವಾಮೀಜಿ, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಮೂಡಲಗಿಯ ಅಮೃತಬೋಧ ಸ್ವಾಮೀಜಿ, ಡೊಣವಾಡದ ಶಿವಾನಂದ ಸ್ವಾಮೀಜಿ, ಇಟನಾಳದ ಸಿದ್ಧೇಶ್ವರ ಸ್ವಾಮೀಜಿ, ಕಟಕಬಾವಿಯ ಅಭಿನವ ಧರೇಶ್ವರ ಸ್ವಾಮೀಜಿ, ತಿಗಡಿಯ ಶಂಕರಾನಂದ ಸ್ವಾಮೀಜಿ, ಚಿಕ್ಕಹಂಚಿನಾಳದ ಶಾಂತಾನಂದ ಸ್ವಾಮೀಜಿ, ತುಕ್ಕಾನಟ್ಟಿಯ ಅಮೋಘತೀರ್ಥ ಸ್ವಾಮೀಜಿ ಅವರು ವಹಿಸುವರು.
ಮೂಡಲಗಿಯ ಮಲ್ಲಯ್ಯ ಹಾಗೂ ಅಯ್ಯಪ್ಪಸ್ವಾಮಿ ಆಶ್ರಮದ ದುಂಡಪ್ಪ ಮಹಾರಾಜರು ನೇತೃತ್ವವಹಿಸುವರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸದ್ಬಕ್ತರಿಗೆ ಪ್ರಸಾದ ಇರುವುದು ಎಂದು ಗೆಳೆಯರ ಬಳಗ ಮತ್ತು ಗಜಾನನ ಯುವಕ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಮೊ. 9449551965, 9740336672 ಸಂಪರ್ಕಿಸಲು ತಿಳಿಸಿದ್ದಾರೆ.
IN MUDALGI Latest Kannada News