Breaking News
Home / Recent Posts / ಕೇಂದ್ರ ಶಿಕ್ಷಣ ಸಚಿವಾಲಯವು ಸಮಗ್ರ ಶಿಕ್ಷಣ ಅಭಿಯಾನ (ಎಸ್.ಎಸ್.ಎ) ಯೋಜನೆಯಡಿ ಶಾಲೆಗಳ ಉನ್ನತಿಕರಣ

ಕೇಂದ್ರ ಶಿಕ್ಷಣ ಸಚಿವಾಲಯವು ಸಮಗ್ರ ಶಿಕ್ಷಣ ಅಭಿಯಾನ (ಎಸ್.ಎಸ್.ಎ) ಯೋಜನೆಯಡಿ ಶಾಲೆಗಳ ಉನ್ನತಿಕರಣ

Spread the love

ಮೂಡಲಗಿ: ಸಮಗ್ರ ಶಿಕ್ಷಣ ಅಭಿಯಾನ (ಎಸ್.ಎಸ್.ಎ) ಯೋಜನೆಯಡಿ ಶಾಲೆಗಳ ಉನ್ನತಿಕರಣಕ್ಕಾಗಿ ರಾಜ್ಯದ 100 ಕರ್ನಾಟಕ ಪಬ್ಲಿಕ್ ಶಾಲೆಗಳ ಪೈಕಿ 50 ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ 2020-21 ಮತ್ತು 2021-22 ಸಾಲಿಗೆ ಪ್ರತಿ ಶಾಲೆಗೆ 200.00 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಸಮಗ್ರ ಶಿಕ್ಷಣ ಅಭಿಯಾನ (ಎಸ್.ಎಸ್.ಎ) ಯೋಜನೆಯಡಿ ಶಾಲೆಗಳ ಉನ್ನತಿಕರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಸಂಸದ ಈರಣ್ಣ ಕಡಾಡಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಗ್ರ ಶಿಕ್ಷಣ ಅಭಿಯಾನ ಕೇಂದ್ರ ಪ್ರಾಯೋಜಿತ ಯೋಜನೆ 2018-19 ರಿಂದ ಜಾರಿಗೊಂಡಿದ್ದು, ಇದು ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಒಂದು ದೊಡ್ಡ ಕಾರ್ಯಕ್ರಮವಾಗಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳ ಮೂಲಭೂತ ಸೌಕರ್ಯಗಳಾದ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಕಲೆ, ಕ್ರಾಫ್ಟ್, ಶೌಚಾಲಯಗಳು, ಸುರಕ್ಷಿತ ಕುಡಿಯುವ ನೀರು, ವಿದ್ಯುದ್ದೀಕರಣ, ಅಡುಗೆ ಮನೆ ಶೆಡ್, ಪೀಠೋಪಕರಣಗಳು, ಕಲಿಕೆಗಾಗಿ ಕಟ್ಟಡ ನೆರವು, ಆಟದ ಮೈದಾನ ಇತ್ಯಾದಿಗಳನ್ನು ಆಧರಿಸಿ ಸಮಗ್ರ ಶಿಕ್ಷಣ ಅಭಿಯಾನದಡಿ ರೂ. 6538.11 ಲಕ್ಷವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಉನ್ನತಿಕರಣಕ್ಕಾಗಿ 48397.68 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 3509 ಶಾಲೆಗಳಲ್ಲಿ 5365 ಶಾಲಾ ಕೋಠಡಿಗಳ ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆÀ 998 ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ರೂ. 8826.95 ಲಕ್ಷ ರೂ ಅಂದಾಜು ಮಾಡಲಾಗಿದ್ದು, ಇದರಲ್ಲ್ಲಿ 7127.47 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ 3509 ಶಾಲೆಗಳಲ್ಲಿ 5365 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ ಒಟ್ಟು ಮೊತ್ತ 48397.68 ಲಕ್ಷ್ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ (ಆರ್.ಆಯ್.ಡಿ.ಎಫ್-25) ನಿಧಿಯಡಿ 2019-20 ಸಾಲಿನಲ್ಲಿ 3386 ಶಾಲೆಗಳಲ್ಲಿ 6489 ಕೋಠಡಿಗಳ ನಿರ್ಮಾಣಕ್ಕಾಗಿ 75807.30 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. 2020-21 ರಲ್ಲಿ ಸಾಲಿನಲ್ಲಿ 6196 ಶಾಲೆಗಳಲ್ಲಿ 13260 ಕೊಠಡಿಗಳ ದುರಸ್ತಿಗಳಿಗಾಗಿ 19951.75 ಕೋಟಿ ಬಿಡುಗಡೆ ಮಾಡಲಾಗಿದೆ ಹಾಗೂ 2020-21 ಸಾಲಿನ ತುರ್ತು ದುರಸ್ತಿಗಾಗಿ ಒಟ್ಟು ರೂ 75807.30 ಲಕ್ಷ ರೂ ಅನುದಾನ ಬಳಕೆ ಆಗಿದೆ ಎಂದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ