Breaking News
Home / Recent Posts / ‘ನಿಸ್ವಾರ್ಥದ ಸಮಾಜ ಸೇವೆಯಲ್ಲಿ ನಿಜವಾದ ಆತ್ಮತೃಪ್ತಿ ಪ್ರಾಪ್ತಿ’

‘ನಿಸ್ವಾರ್ಥದ ಸಮಾಜ ಸೇವೆಯಲ್ಲಿ ನಿಜವಾದ ಆತ್ಮತೃಪ್ತಿ ಪ್ರಾಪ್ತಿ’

Spread the love

 

‘ನಿಸ್ವಾರ್ಥದ ಸಮಾಜ ಸೇವೆಯಲ್ಲಿ ನಿಜವಾದ ಆತ್ಮತೃಪ್ತಿ ಪ್ರಾಪ್ತಿ’

ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಲ್ಲಿ ನಿಜವಾದ ಆತ್ಮತೃಪ್ತಿ ಇರುತ್ತದೆ’ ಎಂದು ಜಮಖಂಡಿಯ ಲಯನ್ಸ್ ಕ್ಲಬ್‍ನ ಪ್ರಾಂತೀಯ ಜಮಖಂಡಿಯ ಎಚ್.ಆರ್. ಮಹಾರಡ್ಡಿ ಹೇಳಿದರು.
ಇಲ್ಲಿಯ ಶಿವಬೋಧರಂಗ ಸೊಸೈಟಿಯ ಸಭಾಭವನದಲ್ಲಿ ಜರುಗಿದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಕಾರ್ಯಚಟುವಟಿಕೆಗಳ ಪರಿವೀಕ್ಷಣೆ ಹಾಗೂ ಲಯನ್ಸ್ ಕ್ಲಬ್‍ನ ಯೋಜನೆಗಳ ತಿಳುವಳಿಕೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜ ಸೇವೆಯನ್ನು ಮಾಡಲು ಲಯನ್ಸ್ ಕ್ಲಬ್‍ವು ಉತ್ತಮ ಸಂಘಟನೆಯಾಗಿದೆ ಎಂದರು.
ಅಂತರ್‍ರಾಷ್ಟ್ರೀಯ ಮಟ್ಟದ ಬಹುದೊಡ್ಡ ಸಮಾಜ ಸೇವಾ ಸಂಘಟನೆಯಾಗಿರುವ ಲಯನ್ಸ್ ಕ್ಲಬ್‍ವು ಸಕ್ಕರೆ ಕಾಯಿಲೆ, ಕಣ್ಣು ರಕ್ಷಣೆ, ರಕ್ತದಾನ, ಆಹಾರ ಬಟ್ಟೆ ವಿತರಣೆ, ಪರಿಸರ ಕಾಳಜಿ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಹಲವಾರು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡಿದೆ ಎಂದರು.
ಮೂಡಲಗಿ ಲಯನ್ಸ್ ಪರಿವಾರವು ಸಮಾಜಿಕವಾಗಿ ಜನಪರವಾದ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಡಾ. ವಿಶ್ವನಾಥ ಗುಂಡಾ ಅವರು ಮಾತನಾಡಿ ಒತ್ತಡದ ವೃತ್ತಿಯಲ್ಲಿ ಒಂದಿಷ್ಟು ಸಮಾಜಿಕವಾಗಿ ಸ್ಪಂದಿಸುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಅಂಥ ಅವಕಾಶವನ್ನು ನಮಗೆ ಲಯನ್ಸ್ ಕ್ಲಬ್ ಮಾಡಿಕೊಟ್ಟಿದೆ ಎಂದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಈಗಾಗಲೇ 30ಕ್ಕೂ ಅಧಿಕ ಸಮಾಜಿಕ ಕಾರ್ಯಚಟುವಟಿಕೆಗಳನ್ನು ಮಾಡಿದ್ದು, ಕ್ಲಬ್‍ದ ಎಲ್ಲ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಅತಿಥಿ ಪ್ರೊ. ಕುಂಬಾರ ಮಾತನಾಡಿದರು.
2021-22ನೇ ಸಾಲಿನಲ್ಲಿ ಲಯನ್ಸ್ ಕ್ಲಬ್‍ಗೆ 6 ಜನ ಸದಸ್ಯರಾಗಿದ್ದು, ಅವರಿಗೆ ಪ್ರಮಾಣ ಪತ್ರಗಳನ್ನು ನೀಡಿದರು.
ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ ಕ್ಲಬ್‍ನ ಸಾಮಾಜಿಕ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಖಜಾಂಚಿ ಸುಪ್ರೀತ ಸೋನವಾಲಕರ ವರದಿ ವಾಚನ ಮಾಡಿದರು.
ವೆಂಕಟೇಶ ಸೋನವಾಲಕರ, ಡಾ. ಸಚಿನ ಟಿ, ಡಾ. ಎಸ್.ಎಸ್. ಪಾಟೀಲ, ಪುಲಕೇಶ ಸೋನವಾಲಕರ, ಡಾ. ತಿಮ್ಮಣ್ಣ ಗಿರಡ್ಡಿ, ಸಂಜಯ ಮೋಕಾಶಿ, ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಗಿರೀಶ ಆಸಂಗಿ, ಸಂಗಮೇಶ ಕೌಜಲಗಿ, ಸುರೇಶ ನಾವಿ, ಮಲ್ಲಪ್ಪ ಖಾನಗೌಡರ, ಪ್ರಮೋದ ಪಾಟೀಲ, ಕೃಷ್ಣಾ ಕೆಂಪಸತ್ತಿ, ಅಪ್ಪಣ್ಣ ಬಡಿಗೇರಿ, ಶಿವಬಸು ಈಟಿ ಭಾಗವಹಿಸಿದ್ದರು.
ಶಿವಾನಂದ ಕಿತ್ತೂರ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಶ್ರೀಶೈಲ್ ಲೋಕನ್ನವರ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ