Breaking News
Home / Recent Posts / ನಾಗನೂರು ಪಿಕೆಪಿಎಸ್‍ಗೆ 20.459 ಲಕ್ಷ ರೂ ನಿವ್ವಳ ಲಾಭ

ನಾಗನೂರು ಪಿಕೆಪಿಎಸ್‍ಗೆ 20.459 ಲಕ್ಷ ರೂ ನಿವ್ವಳ ಲಾಭ

Spread the love

ನಾಗನೂರು ಪಿಕೆಪಿಎಸ್‍ಗೆ 20.459 ಲಕ್ಷ ರೂ ನಿವ್ವಳ ಲಾಭ

ಮೂಡಲಗಿ: ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮತ್ತು ಬಸನಗೌಡ ರಾಮನಗೌಡ ಪಾಟೀಲರವರ ಮಾರ್ಗದರ್ಶನದಲ್ಲಿ ಕಳೆದ ಮಾರ್ಚ ಅಂತ್ಯಕ್ಕೆ 20.459 ಲಕ್ಷ ರೂ ಲಾಭ ಗಳಿಸಿ ಸಂಘವು ಪ್ರಗತಿ ಪಥದತ್ತ ಸಾಗಿದೆ. ಇದು ನಮ್ಮ ಸಂಘದ ಮೇಲೆ ಶೇರುದಾರರು ಮತ್ತು ಠೇವಣಿದಾರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕರಿಹೊಳಿ ಹೇಳಿದರು.

ತಾಲೂಕಿನ ನಾಗನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯ ಸಂಭಾಗಣದಲ್ಲಿ ಜರುಗಿದ, ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಯು ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 1.21 ಕೋಟಿ ಶೇರು ಹಣ ಹೊಂದಿ, 4.1 ಕೋಟಿ ವಿವಿಧ ಸಾಲ, 59 ಲಕ್ಷ ರೂ ನಿಧಿಗಳು, 35 ಲಕ್ಷ ರೂ ಡಿಸಿಸಿ ಬ್ಯಾಂಕ್‍ದಲ್ಲಿ ಶೇರು ಹಣ, 6.63 ಕೋಟಿ ರೂ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ವಿವರಿಸಿದರು.

ಪಿಕೆಪಿಎಸ್‍ನ ಮುಖ್ಯ ಕಾರ್ಯದರ್ಶಿ ದುರದುಂಡಿ ಕೆ ಸಕ್ರೆಪ್ಪಗೋಳ ಮಾತನಾಡಿ, ಸ್ಥಳೀಯ ರೈತರು ಪಿಕೆಪಿಎಸ್‍ದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬಿಸುವ ಕಾರ್ಯ ಎಲ್ಲ ರೈತರು ಮಾಡಬೇಕೆಂದರು. ಪತ್ರಿ ರೈತನಿಗೂ ಎಕರೆ, ಬೆಳೆವಾರು ಆಧಾರದ ಮೇಲೆ ಸಾಲ ನೀಡಲಾಗಿದೆ. ಇದನ್ನು ಸಕಾಲದಲ್ಲಿ ಮರು ಪಾವತಿ ಮಾಡಿದಿದ್ದರೆ ಸಮಸ್ಯೆ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ, ಆದ್ದರಿಂದ ಬಾಕಿ ಉಳಿಸಿಕೊಳ್ಳದೆ ಕಟ್ಟಬೇಕು. ವಿಳಂಬ ಮಾಡದಿದ್ದರೆ ಹೊಸ ಸಾಲವನ್ನು ಸಂಘದಿಂದ ಸುಲಭವಾಗಿ ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಿಳಿಯ ಸದಸ್ಯ ಬಸನಗೌಡ ಪಾಟೀಲ, ಶಂಕರ ಹೊಸಮನಿ, ಗಜಾನನ ಯರಗಣವಿ, ಕೆಂಪಣ್ಣ ಹಳಿಗೌಡ್ರ, ಶಂಕರ ದಳವಾಯಿ, ಕೆಂಪಣ್ಣ ಪಡದಲ್ಲಿ, ಕೆಂಚಪ್ಪ ಸಕ್ರೆಪ್ಪಗೋಳ, ಸತ್ತೇಪ್ಪ ಕರವಾಡಿ, ಭಾರತಿ ಪಾಟೀಲ, ಸುಕನ್ಯಾ ಸಗರೆ, ಯಲ್ಲವ್ವ ಯಡ್ರಾಂವಿ ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ