ಬಡ ಕೂಲಿ ಕಾರ್ಮಿಕರ ನೇರವಿಗೆ ದಾಲ್ಮೀಯಾ ಸಿಮೆಂಟ ಕಾರ್ಖಾನೆ
ಮೂಡಲಗಿ: ಲಾಕ್ ಡೌನ್‍ದಂತಹ ಸಂಕಷ್ಟದ ಕಾಲದಲ್ಲಿ ದಿನಗೂಲಿ ಕಾರ್ಮಿಕರುಕೂಲಿ ಕೆಲಸ ಇರದೆ ಸಂಕಷ್ಟದಲ್ಲಿರುವ ಅತೀ ಬಡ ಕೂಲಿ ಕಾರ್ಮಿಕರನ್ನು ಗುರುತಿಸಿ ಯಾದವಾಡ ದಾಲ್ಮೀಯಾ ಸಿಮೆಂಟ ಕಾರ್ಖಾನೆಯಿಂದ ದಿನ ನಿತ್ಯದ ಆಹಾರ ಧಾನ್ಯಗಳನ್ನು ಕಿಟ್‍ಗಳನ್ನು ಯಾದವಾಡದಲ್ಲಿ ವಿತರಿಸಿಲ್ಲಾಯಿತು.
ದಾಲ್ಮೀಯಾ ಕಾರ್ಖಾನೆಯ ಕಾರ್ಯಕ್ರಮ ಸಂಯೋಜಕ ಚೇತನ ವಾಘಮೋರೆ ಮಾತನಾಡಿ, ಲಾಕ್ ಡೌನ್ ವೇಳೆಯಲ್ಲಿ ಸರಕಾರದ ನಿಯಮಗಳನ್ನು ಚಾಚುತಪ್ಪದೇ ಪಾಲಿಸಬೇಕು. ಮನೆಯಿಂದ ಯಾರು ಅನಾವಶ್ಯಕವಾಗಿ ಹೊರಗೆ ಬರಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಕ ಕೊರೋನಾ ಸೊಂಕು ಸೋಲಿಸಲು ಎಲ್ಲರೂ ಒಂದಾಗಿ ಹೋರಾಡುವಂತೆ ವಿನಂತಿಸಿಕೊಂಡರು.
ಈ ವೇಳೆಯಲ್ಲಿ ದಾಲ್ಮಿಯಾ ಕಾರ್ಖಾನೆಯ ಡಾ: ನೀಲಕಂಠಗೌಡ, ಆಡಳಿತಾಧಿಕಾರಿ ಸುರೇಶ ಪಿಳ್ಳೆ, ಸಿ.ಎಸ್.ಆರ್ ಅಧಿಕಾರಿ ಚೇತನ ವಾಘಮೋರೆ, ಶ್ರೀಶೈಲ್ ಡೋಣಿ, ಯಾದವಾಡ ಗ್ರಾ.ಪಂ ಪಿಡಿಒ ಹುಡೇದ, ಸಿಬ್ಬಂದಿ ಬರ್ಗದವರು ಭಾಗವಹಿಸಿದ್ದರು.