Breaking News
Home / Recent Posts / ಲಿಂಗಾಯತ ದಿನದರ್ಶಿಕೆ – ೨೦೨೨ ಬಿಡುಗಡೆ

ಲಿಂಗಾಯತ ದಿನದರ್ಶಿಕೆ – ೨೦೨೨ ಬಿಡುಗಡೆ

Spread the love

ಲಿಂಗಾಯತ ದಿನದರ್ಶಿಕೆ – ೨೦೨೨ ಬಿಡುಗಡೆ

ಮೂಡಲಗಿ – ಲಿಂಗಾಯತ ಧರ್ಮದ ಇತಿಹಾಸವನ್ನು ಹೊಂದಿರುವ ‘ಲಿಂಗಾಯತ’ ಕ್ಯಾಲೆಂಡರ್ ಉಳಿದ ಕ್ಯಾಲೆಂಡರ್ ಗಿಂತ ಭಿನ್ನವಾಗಿರುತ್ತದೆ. ಲಿಂಗಾಯತ ಧರ್ಮವೆನ್ನುವುದೇ ಒಂದು ದೊಡ್ಡ ಕ್ರಾಂತಿ. ಕೇರಿಗಳಲ್ಲಿ ಇರುವ ಹಾಗೂ ಕಾಯಕ ಮಾಡಿಕೊಂಡು ಇದ್ದ ಜನರನ್ನು ಒಟ್ಟುಗೂಡಿಸಿದ ಧರ್ಮ ಲಿಂಗಾಯತ ಧರ್ಮ ಎಂದು ಮಲ್ಲು ಗೋಡಿಗೌಡರ ಹೇಳಿದರು.
ಇಲ್ಲಿಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ‘ಲಿಂಗಾಯತ’ ದಿನದರ್ಶಿಕೆ ೨೦೨೨ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸಮಾನತೆ ಹೊಂದಿದ್ದ ಸಮಾಜದಲ್ಲಿ ಸಮಾನತೆ ತಂದದ್ದೇ ಲಿಂಗಾಯತ ಧರ್ಮ. ಇಂಥ ಧರ್ಮದ ಬಗ್ಗೆ ಎಲ್ಲರಿಗೂ ಮಾಹಿತಿ ಸಿಗಲಿ ಎಂಬ ಉದ್ದೇಶದಿಂದ ಈ ಕ್ಯಾಲೆಂಡರ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಲಿಂಗಾಯತ ಧರ್ಮದ ವಿಸ್ತೃತ ಮಾಹಿತಿ ಸಿಗುತ್ತದೆ. ಈ ಕ್ಯಾಲೆಂಡರ್ ಪ್ರತಿಯೊಬ್ಬರ ಮನೆಯಲ್ಲೂ ಇರಬೇಕು ಎಂದರು.
ಬಿಜೆಪಿ ಮುಖಂಡ ಪ್ರಕಾಶ ಮಾದರ ಮಾತನಾಡಿ, ೧೨ ನೇ ಶತಮಾನದ ಬಸವಣ್ಣನವರು ಒಬ್ಬ ವಿಶ್ವಗುರು. ಅಂದು ಅವರು ಸಮಾನತೆಗೆ ಹೋರಾಡದಿದ್ದರೆ ಇಂದು ನಮ್ಮ ಸಮಾಜ ಹಲವು ಮೂಢನಂಬಿಕೆಗಳಿಗೆ ಸಿಲುಕಿ ಒದ್ದಾಡುತ್ತಿತ್ತು. ಬಸವಣ್ಣನವರು ಆಗಿನ ಕಾಲದಲ್ಲಿಯೇ ಸಂಸತ್ತನ್ನು ರಚಿಸಿ ಪ್ರಜಾಪ್ರಭುತ್ವದ ಕಲ್ಪನೆ ಮೂಡಿಸಿದ್ದರು. ಅವರ ಮಾರ್ಗದಲ್ಲಿಯೇ ಇಂದು ಲಿಂಗಾಯತ ಧರ್ಮ ಹೊರಟಿದೆ. ಲಿಂಗಾಯತ ದಿನದರ್ಶಿಕೆ ಬಿಡುಗಡೆ ಮಾಡಿದ್ದು ಸೂಕ್ತವಾಗಿದೆ. ಇದರಿಂದ ಸಮಾಜದಲ್ಲಿ ಸಮಾನತೆ ಮೂಡಲಿ ಎಂದು ಆಶಯ ನುಡಿ ನುಡಿದರು.
ನಿವೃತ್ತ ಶಿಕ್ಷಕ ಬಿ ಆರ್ ತರಕಾರ ಹಾಗೂ ಮಲ್ಲಪ್ಪ ಮದಗುಣಕಿ ಮಾತನಾಡಿದರು
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ ಢವಳೇಶ್ವರ, ಪಂಚಮಸಾಲಿ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ, ಈಶ್ವರ ಮುರಗೋಡ, ಅರಭಾವಿ ಬ್ಲಾಕ್ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಶುಭೋದಯ ಸ್ವಾಭಿಮಾನಿ ಕನ್ನಡ ಬಳಗದ ಅಧ್ಯಕ್ಷ ಸುಭಾಸ ಕಡಾಡಿ, ಅಜ್ಜಪ್ಪ ಅಂಗಡಿ, ಈಶ್ವರ ಢವಳೇಶ್ವರ, ಅಣ್ಣೇಶಗೌಡಾ ಉಳ್ಳಾಗಡ್ಡಿ, ಬಸವರಾಜ ಕೌಜಲಗಿ, ರುದ್ರಪ್ಪ ವಾಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ