ಮೂಡಲಗಿ: ಜಾನಪದ ಸಾಹಿತ್ಯದಲ್ಲಿ ಸಮಾಜ ಕಟ್ಟುವ ಶಕ್ತಿ ಇದೆ ಸರ್ವರನ್ನು ಒಂದುಗೂಡಿಸುವ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಕೈಯಲ್ಲಿದೆ ಎಂದು ಗೋಕಾಕ್ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು ಗುರ್ಲಾಪುರ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಹಾಗೂ ಗುರ್ಲಾಪುರ್ ವಿವಿಧ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಕಲೆ ಮತ್ತು ಸಾಂಸ್ಕೃತಿಕ ಉತ್ತೇಜನದ ಯುವಜನೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಡೊಳ್ಳು ಬಾರಿಸುವುದು ಮೂಲಕ ಉದ್ಘಾಟಿಸಿ ಮಾತನಾಡಿ ಎಲ್ಲಾ ಯುವಕ ಸಂಘಗಳ ಕಲಾವಿದರ ಜೊತೆಗೆ ಜಾರಕಿಹೊಳಿ ಕುಟುಂಬವರು ಸದಾ ಇರುತ್ತೇವೆ. ಗ್ರಾಮೀಣ ಭಾಗದ ಜನಪದ ಕಲೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿ ನಮ್ಮ ಜಿಲ್ಲೆಯ ಕೀರ್ತಿಯನ್ನು ಬೆಳೆಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಾಲಶೇಖರ ಬಂದಿ ಮಾತನಾಡಿ ನಮ್ಮ ಉತ್ತರ ಕರ್ನಾಟಕದಲ್ಲಿ ಹಲವಾರು ರೀತಿಯ ಜನಪದ ಕಲೆಗಳನ್ನು ಬೆಳೆಸುತ್ತಿರುವ ಯುವ ಸಂಘಟಕರಿಗೆ ನಮ್ಮ ಭಾಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಮಾಡುವ ಸಹಾಯ ಸಹಕಾರ ನಿಜವಾಗಲೂ ಶ್ಲಾಘನೀಯವಾಗಿದೆ. ನಮ್ಮ ಮೂಲ ಜನಪದ ಕಲೆಗಳನ್ನು ಉಳಿಸಲು ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದರು. ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷರಾದ ರಜನಿ ಜೀರಗಾಳ ಸಾಧಕ ಕಲಾವಿದರಿಗೆ ಜಾನಪದ ಕಲಾ ಸಿರಿ ಪ್ರಶಸ್ತಿ ಪ್ರದಾನ ಮಾಡಿ ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುತ್ತಿರುವ ಯುವ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಟಿವಿ ಮತ್ತು ಮೊಬೈಲ್ ಹಾವಳಿಯಿಂದ ನಗರ ಹಾಗೂ ಪಟ್ಟಣಗಳಲ್ಲಿ ಜಾನಪದ ಕಲೆಗಳು ಮಾಯವಾಗಿವೆ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಮಾತ್ರ ಜನಪದ ಕಲೆಗಳು ಜೀವಂತವಾಗಿವೆ ನಮ್ಮ ಪೂರ್ವಜರ ಕಾಲದಿಂದ ವಂಶಪಾರಂಪರಿಕವಾಗಿ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಎಸ್ ಜಿ ಹಂಚಿನಾಳ ಮಾತನಾಡಿ ಕಡಿಮೆ ಸಮಯದಲ್ಲಿ ಇಂಥ ಅದ್ಭುತ ಕಲಾವಿದರನ್ನು ಕೂಡಿಸಿ ಕಾರ್ಯಕ್ರಮ ಸಂಘಟನೆ ಮಾಡಿದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಅವರ ಕಾರ್ಯ ಅದ್ಭುತವಾಗಿದೆ. ನಮ್ಮೂರಿನ ಯುವಕರು ಅವರಂತೆ ಉತ್ತಮ ಸಂಘಟನೆ ಮಾಡಲು ಯುವ ಮನಸ್ಸುಗಳಿಗೆ ಕಿವಿಮಾತು ಹೇಳಿದರು. ಇಟ್ನಾಳ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರೋಹಿತ ಕಲರಾ,
ವೈಶಾಲಿ ಬರಬರ, ಅಕ್ಕಮಹಾದೇವಿ, ಹಿರಿಯರಾದ ಬಿ ಸಿ ಮುಗಳಕೋಡ, ರಾಮಪ್ಪ ನೇಮಗೌಡರ, ಮಹಾದೇವ ಮುಕುಂದ, ಟಿ ಡಿ ಗಾಣಿಗೇರ, ಸಿದ್ದು ಗಡ್ಡೆಕಾರ, ಪ್ರಕಾಶ್ ಮುಗಳಕೋಡ, ಆನಂದ ಟಪಾಲ್ದಾರ, ಮಲ್ಲೇಶ್ ಮುಗಳಕೋಡ, ರಾಮಚಂದ್ರ ಕಾಂಬಳೆ, ಭರತ ಕಲಾಚಂದ್ರ , ಎಂ ಪಿ ಮರನೂರ, ಬಸವರಾಜ ಜಕ್ಕಣ್ಣವರ, ಹನುಮಂತ ಹಾವನ್ನವರ, ರಾಘವೇಂದ್ರ ಲಂಬುಗೋಳ, ಮಾದೇವ ಮುರುಗೋಡ, ಹಾಲಪ್ಪ ಗಡ್ಡಿಕಾರ್, ಶಿವರಾಜ್ ಮುಗುಳಕೋಡ ಹಾಗೂ ಗಣ್ಯರು ಸಂಘಟಕರು ಮುಂತಾದವರು ಉಪಸ್ಥಿತರಿದ್ದರು. ಆನಂದ್ ಸುಳ್ಳನವರ ಸ್ವಾಗತಿಸಿ ವಂದಿಸಿದರು ಶೃತಿ ಜಾದವ್ ನಿರೂಪಿಸಿದರು.
ಪ್ರಾರಂಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಕಲಾಪೋಷಕ ಸಂಘ ನಾಡಗೀತೆ ಹಾಗೂ ರೈತ ಗೀತೆ ಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಬೆಳಗಾವಿ ಜಿಲ್ಲೆಯ ಒಟ್ಟು 14 ಕಲಾತಂಡಗಳು ಹಾಗೂ ಕಲಾವಿದರು ಈ ಕಾರ್ಯಕ್ರಮದಲ್ಲಿ ವಿವಿಧ ಕಲಾಪ್ರಕಾರಗಳ ಆದ ಜನಪದ ಗೀತೆ ಕೋಲಾಟ ಡೊಳ್ಳು ಕುಣಿತ ಜನಪದ ನೃತ್ಯ ಸುಗಮ ಸಂಗೀತ ಬಜನಾಪದ ಏಕಪಾತ್ರಾಭಿನಯ ತತ್ವಪದ ಗೀಗಿ ಪದ ಭರತನಾಟ್ಯ ಸಿದ್ಧಿ ಕುಣಿತ ಭಾವಗೀತೆ ರಂಗಗೀತೆ ಲಾವಣಿ ಪದ ಡೊಳ್ಳಿನ ಪದ ಹೀಗೆ ಗ್ರಾಮೀಣ ಭಾಗದ ಮೂಲ ಜನಪದ ಕಲೆಗಳನ್ನು ವೇದಿಕೆ ಮೇಲೆ ಪ್ರದರ್ಶನ ಮಾಡಲಾಯಿತು. ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ 12 ಜನ ಸಾಧಕರಿಗೆ ಜನಪದ ಕಲಾಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.