ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ 10.09 ಕೋಟಿ ರೈತ ಬಂಧುಗಳಿಗೆ ರೂ.20,900 ಕೋಟಿ ರೂ ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ಇಂದು ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘೀಸಿದ್ದಾರೆ.
ಶನಿವಾರ ಜ.01 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ 34.26 ಲಕ್ಷ ಅಧಿಕ ರೈತರ ಬ್ಯಾಂಕ ಖಾತೆಗಳಿಗೆ 685 ಕೋಟಿ ಹಾಗೂ ಬೆಳಗಾವಿ ಜಿಲ್ಲೆಯ 4,08,119 ರೈತರ ಬ್ಯಾಂಕ ಖಾತೆಗಳಿಗೆ 81.62 ಕೋಟಿ ರೂ. 10ನೇ ಕಂತನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷ ಅರ್ಹ ರೈತರ ಖಾತೆಗೆ 6,000 ರೂ. ನಗದು ಪಾವತಿ ಮಾಡಲಾಗುತ್ತದೆ. ಮೂರು ಕಂತುಗಳಲ್ಲಿ ತಲಾ 2,000 ರೂ.ನಂತೆ ಹಣ ಪಾವತಿ ಮಾಡಲಾಗುತ್ತದೆ. ನೇರವಾಗಿ ರೈತರ ಖಾತೆಗೆ ಹಣ ಪಾವತಿ ಮಾಡುವುದು ಈ ಯೋಜನೆಯ ವಿಶೇಷ ಎಂದರು.
351 ರೈತ ಉತ್ಪಾದಕ ಸಂಸ್ಥೆ (ಎಫ್‍ಪಿಒ)ಗಳಿಗೆ ಈಕ್ವಿಟಿ ಅನುದಾನವಾಗಿ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. ಇದರಿಂದ 1.24 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುವ ಸರ್ಕಾರದ ಪ್ರಯತ್ನದ ಭಾಗವಾಗಿ ಪಿಎಂ-ಕಿಸಾನ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ, ಪ್ರಧಾನ್ ಮಂತ್ರಿ ಕಿಸಾನ್ ಸಂಪದ ಯೋಜನೆ, ಪ್ರಧಾನ್ ಮಂತ್ರಿ ಮಾನ್ ಧನ್ ಯೋಜನೆ, ಪ್ರಧಾನ್ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಫರ್ ಡ್ರಾಫ್ ಮೋರ್ ಕ್ರಾಫ್), ಪರಂಪರಗತ್ ಕೃಷಿ ವಿಕಾಸ ಯೋಜನೆ, ಸಾಯಿಲ್ ಹೆಲ್ತ್ ಕಾರ್ಡ, ಕಿಸಾನ್ ಕ್ರೆಡಿಟ್ ಕಾರ್ಡ, ಮಣ್ಣಿನ ಆರೋಗ್ಯ ಕಾರ್ಡ, ಪಿಎಂ-ಕುಸುಮ್ ಯೋಜನೆ ಹೀಗೆ ಹಲವಾರು ಯೋಜನೆಗಳÀ ಅನುಷ್ಠಾನಗೊಳಿಸುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿಗೆ ಹೆಚ್ಚನ ಮಹತ್ವ ಕೊಟ್ಟು ಯುವಕರು ಕೃಷಿ ಕಡೆಗೆ ವಾಲುವಂತೆ ಪ್ರೋತ್ಸಾಹ ನೀಡುತ್ತಾರೆ, ಯುವಕರು ಕೃಷಿಗೆ ಆದ್ಯತೆ ಕೊಡುತ್ತಿದ್ದಾರೆಂದರು.
‘ಬೀಜ್-ಸೆ-ಬಜಾರ ತಕ್’ ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಎನ್ನುವ ಕೃಷಿ ಸುಧಾರಣೆಯ ಘೋಷಣೆಯ ಜೊತೆಗೆ ರೈತರ ಇಳುವರಿಗೆ ಉತ್ತಮ ದರ ನಿಗಧಿಪಡಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇತ್ತೀಚಿಗೆ ಕಬ್ಬು ಬೆಳೆಗಾರರಿಗೆ ತಾವು ಬೆಳೆದ ಉತ್ಪನ್ನಕ್ಕೆ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸದ ಕಾರಣ ದೇಶದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬಾರದೆಂದು ರೂ.3500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ ಎಂದರು. ರೈತ ಮೋರ್ಚಾ ವತಿಯಿಂದ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಪರೆನ್ಸ್ ನೇರಪ್ರಸಾರದ ವೀಕ್ಷಣೆಯನ್ನು ರೈತರೊಂದಿಗೆ ವೀಕ್ಷಿಸಲಾಯಿತು.
ಹಣ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತನ್ನು ಕೇಂದ್ರ ಸರಕಾರ ರೈತರ ಖಾತೆಗೆ ಪಾವತಿ ಮಾಡಿದೆ.
ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಣ ವರ್ಗಾವಣೆ ಮಾಡಿದರು.
ಕಿಸಾನ್ ಸಮ್ಮಾನ್: ರಾಜ್ಯ ಸರಕಾರದ 3 ಕಂತು ಬಾಕಿ, ರೈತರಿಗೆ ಪಾವತಿಯಾಗಬೇಕಿದೆ 2,860 ಕೋಟಿ ರೂ.!
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ
ಈ ವರ್ಚುವಲ್ ಕಾರ್ಯಕ್ರಮದಲ್ಲಿ 9 ರಾಜ್ಯಗಳ ಮುಖ್ಯಮಂತ್ರಿಗಳು, ಹಲವು ರಾಜ್ಯಗಳ ಸಚಿವರು, ಕೃಷಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪಿಎಂ ಕಿಸಾನ್ 10ನೇ ಕಂತಿನ ಹಣ ಶೀಘ್ರ ಬಿಡುಗಡೆ, ಆಧಾರ್ ಲಿಂಕ್ ಮಾಡಲು ಹೀಗೆ ಮಾಡಿ
ಈ ಸಂದರ್ಭದಲ್ಲಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, 2022ರ ಹೊಸ ವರ್ಷದ ಮೊದಲ ದಿನದಂದು ಸುಮಾರು 10.09 ಕೋಟಿ ಫಲಾನುಭವಿಗಳಿಗೆ ಸುಮಾರು 20,900 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಈ ಹಿಂದೆ 2021ರ ಆಗಸ್ಟ್‍ನಲ್ಲಿ ಪಿಎಂ-ಕಿಸಾನ್ ಯೋಜನೆಯಡಿ 9ನೇ ಕಂತನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಸುಮಾರು ನಾಲ್ಕು ತಿಂಗಳ ನಂತರ
ಹೊಸ ಕಂತಿನ ಬಿಡುಗಡೆಯೊಂದಿಗೆ ಯೋಜನೆಯಡಿ ಬಿಡುಗಡೆ ಮಾಡಲಾದ ಒಟ್ಟು ಮೊತ್ತವು ಸುಮಾರು 1.8 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಿದೆ. 2019ರ ಫೆಬ್ರವರಿಯಲ್ಲಿ ಮಂಡಿಸಲಾದ ಕೇಂದ್ರ ಬಜೆಟ್‍ನಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಘೋಷಿಸಲಾಗಿತ್ತು.