Breaking News
Home / Recent Posts / ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ಜೀವನ ಆನಂದವಾಗಿಸಿರಿ

ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ಜೀವನ ಆನಂದವಾಗಿಸಿರಿ

Spread the love

ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ಜೀವನ ಆನಂದವಾಗಿಸಿರಿ

ಮೂಡಲಗಿ: ‘ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರಮಾಡಿ ಉತ್ತಮ ಚಿಂತನೆ, ಆಚರಣೆಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡು ಜೀವನವನ್ನು ಆನಂದಮಯವಾಗಿಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರೇಖಾ ಅಕ್ಕನವರು ಭಕ್ತರೊಂದಿಗೆ ದೀಪವನ್ನು ಬೆಳಗಿಸುವ ಮೂಲಕ ಹೊಸ ವರ್ಷವನ್ನು ಆಚರಿಸಿ ಮಾತನಾಡಿದ ಅವರು ದೇವರಲ್ಲಿ ಧ್ಯಾನ, ಭಕ್ತಿಯನ್ನು ಇಡುವುದರ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಮಾಡಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಪ್ರೀತಿ, ಸೌಹಾರ್ದತೆಯಿಂದ ಬದುಕುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಎಂದರು.
ಭಕ್ತಿಯ ಗಾಯನ ಮತ್ತು ಧ್ಯಾನವನ್ನು ಮಾಡಿದರು. ಭಕ್ತರಿಗೆ ಸಿಹಿ ಹಂಚಿದರು.
ಬ್ರಹ್ಮಕುಮಾರಿ ಸವಿತಾ ಅಕ್ಕನವರು ಹಾಗೂ ಭಕ್ತರು ಭಾಗವಹಿಸಿದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ