Breaking News
Home / Recent Posts / ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು- ಲಸಿಕೆ ಹಾಕಿಸಿ-ಸಂಸದ ಈರಣ್ಣ ಕಡಾಡಿ ಪೊಷಕರಲ್ಲಿ ಮನವಿ

ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು- ಲಸಿಕೆ ಹಾಕಿಸಿ-ಸಂಸದ ಈರಣ್ಣ ಕಡಾಡಿ ಪೊಷಕರಲ್ಲಿ ಮನವಿ

Spread the love

ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು- ಲಸಿಕೆ ಹಾಕಿಸಿ-ಸಂಸದ ಈರಣ್ಣ ಕಡಾಡಿ ಪೊಷಕರಲ್ಲಿ ಮನವಿ

ಮೂಡಲಗಿ: ಕೋವಿಡ್‍ನಿಂದ ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿ ಪೊಷಕರಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು.


ಸೋಮವಾರ ಜ.03 ರಂದು ಕಲ್ಲೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಡಿಸೆಂಬರ್ 25 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, 15-18 ವರ್ಷ ವಯೋಮಾನದ ಮಕ್ಕಳಿಗೆ ಜನವರಿ 3 ರಿಂದ ಕೋವಿಡ್ -19 ವಿರುದ್ಧದ ಲಸಿಕೆಯನ್ನು ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಕೋವಿಡ್ 3ನೇ ಅಲೆ ತಡೆಗಟ್ಟುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲು ಶೀಘ್ರ ಕ್ರಮ ಕೈಗೊಂಡ ಪ್ರಧಾನಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇಂತಹ ಸಮಯದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗುತ್ತಿದೆ. ಕೋವಿಡ್ ಲಸಿಕೆ ಪಡೆದ ನಂತರವೂ, ಸೂಕ್ತ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಹಿಂಜರಿಕೆ ಬೇಡ, ಮರೆಯದೇ ಲಸಿಕೆ ಪಡೆಯಿರಿ. ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಿ. ಈ ಮೂಲಕ ಸಂಭವನೀಯ ಮೂರನೇ ಅಲೆ ಬಾರದಂತೆ ತಡೆಗಟ್ಟಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಭಾವಚತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಲ್ಲೋಳಿ ಪ.ಪಂ ಮುಖ್ಯಾಧಿಕಾರಿ ಅರುಣಕುಮಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮೀ, ಪ್ರಾಚಾರ್ಯ ರಾಘವೇಂದ್ರ ಗಂಗರಡ್ಡಿ, ಕೆ. ಬಿ ಸಾಯನ್ನವರ, ಶಿವಾನಂದ ಕರೋಳಿ, ಎಸ್. ಎ. ಅರಳಿಕಟ್ಟಿ, ಆಶಾ ಮೇಲ್ವಿಚಾರಕಿ ಯಲ್ಲವ್ವ ಗುಡದನ್ನವರ, ರಮೇಶ ಎಮ್ಮಿ ಸೇರಿದಂತೆ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ