ಮೂಡಲಗಿಯ ಜ್ಯೋತಿರ್ಲಿಂಗ ಸಹಕಾರಿ ಸಂಘದಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ
ಮೂಡಲಗಿ: ಇಲ್ಲಿನ ಜ್ಯೋತಿರ್ಲಿಂಗ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ಅಕ್ಷರ ತಾಯಿ ಸಾವಿತ್ರಿ ಬಾಯಿ ಪುಲೆಯವರ 191ನೇ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು.
ಈ ಸಮಯದಲ್ಲಿ ಸಂಘದ ನಿರ್ದೇಶಕ ಈರಪ್ಪ ಬನ್ನೂರ ಮಾತನಾಡಿ, ದೀನ ದಲಿತರ ಶೈಕ್ಷಣಿಕ ಅಭಿವೃದ್ದಿಗೆ ತಮ್ಮ ಜೀವ ಪಣಕ್ಕಿಟ್ಟು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಹೆಣ್ಣು ಮಕ್ಕಳೂ ಶಿಕ್ಷಣ ಪಡೆಯುವಂತೆ ಶ್ರಮಿಸಿದ ಸಾವಿತ್ರಿ ಬಾಯಿ ಪುಲೆ ಅವರ ಆದರ್ಶ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಳಿ ಸಮಾಜದ ಹಿರಿಯ ಅಧ್ಯಕ್ಷರಾದ ಮುತ್ತಪ್ಪ ಈರಪ್ಪನವರ, ಗಣ್ಯರಾದ ಚನ್ನಬಸು ಬಡ್ಡಿ, ಯಲ್ಲಪ್ಪ ಖಾನಪ್ಪಗೋಳ, ಬಸವರಾಜ ಮಾಗಾರ, ಶಂಕರ ಕೊತಂಬರಿ ಸಂಘದ ಅಧ್ಯಕ್ಷ ಲಕ್ಷ್ಮಣ ಮಾಲಗಾರ, ಉಪಾಧ್ಯಕ್ಷ ಮಲ್ಲಪ್ಪ ಮುತಾರಿ, ಪ್ರಧಾನ ವ್ಯವಸ್ಥಾಪಕ ವಿಠ್ಠಲ ಕಮತೆ, ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.