ಡೇ-ನಲ್ಮ್ ವಿಭಾಗದಲ್ಲಿ ಸಿಆರ್‍ಪಿ ಹುದ್ದೆಗೆ ಅರ್ಜಿ ಆಹ್ವಾನ
ಮೂಡಲಗಿ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಸ್ವಸಹಾಯ ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೂಡಲಗಿ ಪುರಸಭೆಗೆ ಒಟ್ಟು 2 ಹುದ್ದೆ ಖಾಲಿ ಇದ್ದು ಗೌರವಧನ ಮಾಸಿಕ ರೂ. 8 ಸಾವಿರ ಹಾಗೂ ಪ್ರಯಾಣ ಭತ್ಯೆ ಗರಿಷ್ಟ 2 ಸಾವಿರ ರೂ. ನೀಡಲಾಗುವುದು. 18 ರಿಂದ 45 ವಯೋಮಿತಿಯುಳ್ಳವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆಸಕ್ತರು ಕಾರ್ಯಾಲಯದ ಅವಧಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ಜನೇವರಿ 20 ರೊಳಗಾಗಿ ಮೂಡಲಗಿ ಪುರಸಭೆಗೆ ಸಲ್ಲಿಸಲು ಮುಖ್ಯಾಧಿಕಾರಿ ಡಿ.ಎಸ್.ಹರ್ದಿ ತಿಳಿಸಿದ್ದಾರೆ.