ಮೂಡಲಗಿಯ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಶಿವಬೋಧರಂಗ ಮಠದ ನೂತನ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.
‘ಕುರುಹಿನಶೆಟ್ಟಿ ಸೊಸೈಟಿಯ ಸಮಾಜಮುಖಿ ಕಾರ್ಯವು ಶ್ಲಾಘನೀಯವಾಗಿದೆ’
ಮೂಡಲಗಿ: ‘ಕುರುಹಿನಶೆಟ್ಟಿ ಸೊಸೈಟಿಯು ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಗನೀಯವಾಗಿದೆ’ ಎಂದು ಶ್ರೀಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು.
ಇಲ್ಲಿಯ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಹೈಟೆಕ್ ರಕ್ತ ತಪಾಸಣೆ ಕೇಂದ್ರ ಹಾಗೂ ಗೋಕಾಕ ಬ್ಲ್‍ಡ ಬ್ಯಾಂಕ್ ಇವುಗಳ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ಬೃಹತ್ ಐಚ್ಛಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನವು ಎಲ್ಲ ದಾನಗಳಲ್ಲಿ ಶ್ರೇಷ್ಠ ದಾನವಾಗಿದೆ ಎಂದರು.
ಕಲ್ಮಶ ಆಹಾರ ಸೇವನೆಯು ರೋಗ, ರುಜೀನಗಳಿಗೆ ಮುಖ್ಯ ಕಾರಣವಾಗಿದೆ. ಪೌಷ್ಠಿಕಾಂಶ ಆಹಾರವನ್ನು ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಸತ್ಯ, ಶ್ರದ್ದೆ ಮತ್ತು ಪರಿಶ್ರಮವಿದ್ದರೆ ಯಶಸ್ಸು ಬೆನ್ನುಹಿಂದೆ ಬರುತ್ತದೆ. ಯುವಕರು ಪ್ರಚಾರವನ್ನು ಬಯಸದೆ ಶ್ರದ್ದೆಯಿಂದ ಕಾರ್ಯಮಾಡಬೇಕು. ಪ್ರಚಾರಕ್ಕಾಗಿ ಕಾರ್ಯಮಾಡಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಬಸಪ್ಪ ಮುಗಳಖೋಡ ಅವರು ಮಾತನಾಡಿ ಶ್ರೀಪಾದಬೋಧ ಸ್ವಾಮೀಜಿಯವರು ಸಂಕಲ್ಪದಂತೆ ಕುರುಹಿನಶೆಟ್ಟಿ ಸೊಸೈಟಿಯನ್ನು ಬೆಳೆಸಿದ್ದು, ಅವರ ನುಡಿಯನ್ನು ನಾವು ಚಾಚು ತಪ್ಪದೆ ಪಾಲಿಸಕೊಂಡು ಬಂದಿರುವೆವು. ಇನ್ನು ಮುಂದೆ ಈಗಿನ ಶ್ರೀಗಳಂತೆ ಸೊಸೈಟಿಯನ್ನು ಬೆಳೆಸುತ್ತೇವೆ ಎಂದರು.
ಪ್ರೊ. ಶಿವಾನಂದ ಬೆಳಕೂಡ, ಬಾಲಶೇಖರ ಬಂದಿ ಅವರು ಮಾತನಾಡಿದರು.
ರಕ್ತದಾನ ಶಿಬಿರದಲ್ಲಿ 125ಕ್ಕೂ ಅಧಿಕ ಸಂಖ್ಯೆಯಲ್ಲಿ ರಕ್ತದಾನವನ್ನು ಮಾಡಿದರು.
ಸೊಸೈಟಿಯ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಸುಭಾಸ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೋಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ ಹಾಗೂ ಬಿ.ವೈ. ಶಿವಾಪುರ, ಹೈಟೆಕ್ ರಕ್ತ ತಪಾಸಣಾ ಕೇಂದ್ರದ ನವಾಜ ಕಳ್ಳಿಮನಿ ಇದ್ದರು.