Breaking News
Home / Recent Posts / ಹಿರಿಯ ಜೀವಿಗಳನ್ನು ಗೌರವಿಸುವುದು ಇಂದಿನ ಯುವ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ : ಬಾಲಶೇಖರ ಬಂದಿ

ಹಿರಿಯ ಜೀವಿಗಳನ್ನು ಗೌರವಿಸುವುದು ಇಂದಿನ ಯುವ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ : ಬಾಲಶೇಖರ ಬಂದಿ

Spread the love

ಹಿರಿಯ ಜೀವಿಗಳನ್ನು ಗೌರವಿಸುವುದು ಇಂದಿನ ಯುವ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ : ಬಾಲಶೇಖರ ಬಂದಿ

ಮೂಡಲಗಿ : ಭಾರತಿಯ ಸಂಸ್ಕೃತಿಯು ಗ್ರಾಮೀಣ ಭಾಗದ ಹಿರಿಯ ಜೀವಿಗಳಾದ ಅಜ್ಜ-ಅಜ್ಜಿಯಲ್ಲಿ ಮಾತ್ರ ಇಂದಿನ ದಿನಗಳಲ್ಲಿ ಹೆಚ್ಚಾಗಿ ಉಳಿದಿದೆ ನಮ್ಮ ಸಂಸ್ಕೃತಿಯ ಆಚಾರ-ವಿಚಾರ ನಡೆ-ನುಡಿಗಳ ಕುರಿತು ಅಜ್ಜ ಅಜ್ಜಿಯರ ಮೂಲಕ ಮೊಮ್ಮಕ್ಕಳಿಗೆ ತಲುಪಿಸಬೇಕಾಗಿದೆ ಇಂದಿನ ಮಕ್ಕಳು ಗುರು ಹಿರಿಯರನ್ನು ಗೌರವದಿಂದ ಕಾಣುವುದು ಮತ್ತು  ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಮತ್ತು ಕ್ರಿಯಾಶೀಲತೆಯನ್ನು ಹುಟ್ಟಿಸುವುದು ಶಿಕ್ಷಣದ ಮಹತ್ವದ ಭಾಗವಾಗಿದ್ದು ಶಾಲಾ ಹಂತದಲ್ಲಿ ಮಕ್ಕಳ ಸೃಜನಶೀಲತೆಯನ್ನು ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವ ಕಾರ್ಯದಲ್ಲಿ ಶ್ರೀ ವಿದ್ಯಾನಿಕೇತನ ಇಂಟರನ್ಯಾಷನಲ್ ಸಿ ಬಿ ಎಸ್ ಇ ಸ್ಕೂಲ್ ಮಹತ್ವದ ಕಾರ್ಯದಲ್ಲಿ ತೊಡಗಿದೆ ಆದರಿಂದ ಈ ಸಂಸ್ಥೆಯು

ಇಂತಹ ಕಾರ್ಯಕ್ರಮಗಳನ್ನು ನಡೆಸಿ ಉನ್ನತ ಸ್ಥಾನಕ್ಕೆ ಹೋಗಲಿ ಎಂದು ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ನಿವೃತ್ತ ಗ್ರಂಥಪಾಲಕ ಬಾಲಶೇಖರ ಬಂದಿ ಹೇಳಿದರು.


ಅವರು ಸ್ಥಳೀಯ ಆರ್.ಡಿ.ಸಂಸ್ಥೆಯ ಶ್ರೀ ವಿದ್ಯಾನಿಕೇತನ ಇಂಟರನ್ಯಾಷನಲ್ ಸಿ.ಬಿ.ಎಸ್.ಇ ಶಾಲೆಯಯಲ್ಲಿ ಆಯೋಜಿಸಿದ ಅಜ್ಜ-ಅಜ್ಜಿಯರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಕುಂಟುಂಬದ ಹಿರಿಯ ಜೀವಗಳು ಅನುಭವದ ಮೇಲೆ ಬದುಕಿನ ಮೌಲ್ಯಗಳನ್ನು ಮೊಮ್ಮಕ್ಕಳಿಗೆ ತಿಳಿಸಿಕೊಡಬೇಕೆಂದರು.
ಅತಿಥಿಗಳಾದ ನಿವೃತ್ತ ಪ್ರೌಢ ಶಾಲೆ ಶಿಕ್ಷಕರಾದ ಮನೋಹರ ಮೂಡಲಗಿ ಯವರು ಮಾತನಾಡಿ ಮನೆಯ ಮೊದಲ ಪಾಠಶಾಲೆ ಮಕ್ಕಳು ತಮ್ಮ ಮನೆಗಳಲ್ಲಿ ತಂದೆ-ತಾಯಿ ಅಜ್ಜ-ಅಜ್ಜಿಯವರನ್ನು ನೋಡಿ ಕಲಿಯುತ್ತಾರೆ ಆದರಿಂದ ತಂದೆ-ತಾಯಿಗಳು ಮಕ್ಕಳಿಗೆ ಆದರ್ಶವಾಗಿರಬೇಕು ಮಕ್ಕಳಿಗೆ ಒಳ್ಳೆಯ ವಿಚಾರ ಕಲಿಸ ಕೊಡಬೇಕು ಮಕ್ಕಳಿಗೆ ಸುಳ್ಳು ಹೇಳುವುದನ್ನು ಮತ್ತು ಅಸಭ್ಯವಾದ ಮಾತುಗಳನ್ನು ಕಲಿಸಬಾರದು ಮಕ್ಕಳಿಗೆ ಮನೆಯಲ್ಲಿ ಸುಂದರವಾದ ವಾತಾವರಣವನ್ನು ನಿರ್ಮಾಣ ಮಾಡಿ ನಮ್ಮ ಸಂಸ್ಕೃತಿಯನ್ನು ಪರಿಚಯ ಮಾಡಿ ಕೊಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ತಮ್ಮಣ್ಣಾ ಪಾರ್ಶಿ ವಹಿಸಿಕೊಂಡು ಮಾತನಾಡಿ ನಮ್ಮ ಕುಟುಂಬದಲ್ಲಿ ಇರುವ ಸಾಂಸ್ಕೃತಿಕ ಮೌಲ್ಯಗಳನ್ನು ಬಿಟ್ಟು ಬೇರೆ ದೇಶದ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿ ಮೌಲ್ಯಗಳನ್ನು ಮರೆಯಬಾರದು ಮಕ್ಕಳು ಪಡೆಯುವ ಶಿಕ್ಷಣ ಕೇವಲ ಹಣ ಸಂಪಾದನೆಗೆ ಮಾತ್ರ ಸೀಮತವಾಗಬಾರದು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಗಳನ್ನು ಬೆಳಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಕಸ್ತೂರಿ ತಮ್ಮಣ್ಣಾ ಪಾರ್ಶಿ ಶಾಲೆಯ ಪ್ರಾಚಾರ್ಯ  ಜೊಸೇಪ್ ಎಸ್.ಬಿ , ಸಂಯೋಜಕ ಶ್ರೀಧರ ಪತ್ತಾರ, ಮೂಡಲಗಿ ಕೆ.ಇ.ಬಿ. ಸೆಕ್ಷನ್ ಆಪೀಸರ್ ಸುರೇಶ ಮುರಗೋಡ ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳ ಅಜ್ಜ-ಅಜ್ಜಿ ಯವರು ಭಾಗವಹಿಸಿದ್ದರು ಹಿರಿಯ ಅಜ್ಜ -ಅಜ್ಜಿಯರಿಗೆ ಮೊಮ್ಮಕ್ಕಳಿಂದ ಆರತಿ ಕಾರ್ಯಕ್ರಮವನ್ನು ನಡೆಸಲಾಯಿತು ಈ ಕಾರ್ಯಕ್ರಮವನ್ನು ಶಿಕ್ಷಕರಾದ ವಿದ್ಯಾಶ್ರೀ ಮುರಗೋಡ ಹಾಗೂ ಸುನೀತಾ ಸುಣಧೊಳಿ ನಿರೂಪಿಸಿದರು ಮನಿಶಾ ದೋಸಾನಿ ಸ್ವಾಗತಿಸಿದರು ಕುಮಾರಿ ಸೌಮ್ಯ ಬೈರನಟ್ಟಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ