ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ
ಮರು ಚುನಾವಣೆ ನಡೆಸುವಂತೆ ಬಿಜೆಪಿ ಪರಾಜೀತ ಅಭ್ಯರ್ಥಿಗಳಿಂದ ಮನವಿ
ಮೂಡಲಗಿ:ಅರಭಾಂವಿ ಮತಕ್ಷೇತ್ರದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಡಿ-27 ರಂದು ನಡೆದ ನಂತರ ಮೂಡಲಗಿ ಶ್ರೀ ಶಿವಬೋಧರಂಗ ಕಾಲೇಜಿನ ಸ್ಟ್ರಾಂಗ್ ರೂಮನಲ್ಲಿ ಇರಿಸಲಾದ ಮತಯಂತ್ರ ಬದಲಾವಣೆಯಾಗಿವೆ ಎಂದು ಬುಧವಾರ ನಗರದ ತಹಶೀಲ್ದಾರ ಕಚೇರಿ ಎದುರು ಕಲ್ಲೋಳಿ ಪಟ್ಟಣದ ನೂರಾರು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರಿಗೆ ಮನವಿ ಸಲ್ಲಿಸಿ, ಮರು ಚುನಾವಣೆ ನಡೆಸಬೇಕೇಂದು ಆಗ್ರಹಿಸಿದರು.
ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಮತಯಂತ್ರ ಬದಲಾವಣೆಯಾಗಿ ಚುನಾವಣೆ ಅಕ್ರಮವಾಗಿದೆ ಎಂದು ಸಂಶಯವಿದ್ದು ಡಿ-27 ರಿಂದ ಸಂಜೆ 6-00 ಗಂಟೆಯಿಂದ ಡಿ-30 ರ ಮಧ್ಯಾಹ್ನ 12-00 ಗಂಟೆವರೆಗೆ ಸ್ಟ್ರಾಂಗ್À ರೂಮನಲ್ಲಿ ಅಳವಡಿಸಿರುವ ಸಿಸಿಟಿವಿ ಪೂಟೇಜ್ ಮತ್ತು ಸ್ಟ್ರಾಂಗ ರೂಮ ಬಾಗಿಲ ಲಾಕ್ ಮಾಡುವುದು, ಸ್ಟ್ರಾಂಗ ರೂಮ ಬಾಗಿಲ ತೆಗೆಯುವುದು ವಿಡಿಯೋ ಪೊಟೇಜ್ ನೀಡುವಂತೆ ತಹಶೀಲ್ದಾರಿಗೆ ಒತ್ತಾಯಿಸಿದರು.
ಮತದಾರರು ಈ ವಾರ್ಡಿನಿಂದ ಆ ವಾರ್ಡಿಗೆ ಹೆಸರು ಸೇರ್ಪಡೆ ಆಗಿವೆ ಅವುಗಳ ಬಗ್ಗೆ ಬಿಎಲ್‍ಒ ಗಮನ ಸೇಳೆದರು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಸಿಸಿಟಿವಿ ಪೂಟೇಜ್ ಈ ಬಗ್ಗೆ ಬೇಗ ಮಾಹಿತಿ ಸಿಗಬೇಕು ಇಲ್ಲದಿದ್ದರೆ ಮುಂದಿನ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಮುಖ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಅಜೀತ ಬೆಳಕೂಡ ಎಚ್ಚರಿಸಿದರು.
ಈ ಸಂದರ್ಬದಲ್ಲಿ ಪರಾಜೀತ ಅಭ್ಯರ್ಥಿಗಳಾದ, ಪ್ರಭು ಕಡಾಡಿ, ಅಶೋಕ ಮಕ್ಕಳಗೇರಿ, ಶಿವಪ್ಪ ಬಿ.ಪಾಟೀಲ, ಧರೇಪ್ಪ ಖಾನಗೌಡ, ಅಕ್ಷತಾ ಹುಗಾರ, ಗೀತಾ ನೀಲಪ್ಪ ಮುಂಡಿಗನಾಳ, ಭಾಗ್ಯಶ್ರೀ ಆಡಿನವರ, ಪಾರ್ವತಿ ಚೌಗಲಾ, ಉಮೇಶ ಬಿ.ಪಾಟೀಲ, ಬಸವರಾಜ ಭಜಂತ್ರಿ, ರೇಣುಕಾ ಇಮ್ಮಡೇರ. ಪ್ರಮುಖರಾದ ಹಣಮಂತ ಸಂಗಟಿ, ಈರಣ್ಣ ಮೂನೊಳಿಮಠ, ಭೀಮರಾಯ ಕಡಾಡಿ, ಶಿವಾನಂದ ಹೆಬ್ಬಾಳ, ಮಲ್ಲೇಶ ಗೋರೋಶಿ, ಶಿವಾನಂದ ಕಡಾಡಿ, ರಾಮಲಿಂಗ ಬಿ.ಪಾಟೀಲ, ಕೃಷ್ಟಾ ಮುಂಡಿಗನಾಳ, ಘೂಳಪ್ಪ ಮೇಟಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತಿ ಇದ್ದರು.