ಪ್ರಧಾನಿಗೆ ಭದ್ರತಾ ಲೋಪ-ಸಂಸದ ಈರಣ್ಣ ಕಡಾಡಿ ಆತಂಕ
ಮೂಡಲಗಿ: ಪಂಜಾಬ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು 15 ರಿಂದ 20 ನಿಮಿಷಗಳ ಕಾಲ ತಡೆಯುವಂತೆ ಮಾಡಿ ಭದ್ರತಾ ವೈಫಲ್ಯ ವೆಸಗಿದ ಪಂಜಾಬ್ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆತಂಕ ವ್ಯಕ್ತಪಡಿಸಿದರು.
ಬುಧಾವಾರ ಜ 5 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಇದು ಕ್ರಾಂಗೇಸ್ ಪಕ್ಷದ ತುಕ್ಕು ಹಿಡಿದ, ರೋಗಗ್ರಸ್ತ, ನೀರ್ಲಜ್ಯ ಮನೋಸ್ಥಿತಿಯನ್ನು ಬಿಂಬಿಸುತ್ತದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಕಾಂಗ್ರೇಸ್ ಪಕ್ಷ ದೇಶದ ಜನರ ಕ್ಷಮೆಯಾಚಿಸಲಿ, ತಮ್ಮ ಪಕ್ಷದ ಪಂಚಾಬ್ ಮುಖ್ಯಮಂತ್ರಿಯ ಮೇಲೆ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶೀಘ್ರ ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಬಾರಿ ಬೆಲೆ ತೆರಬೇಕಾದಿತು ಎಂದರು.
ಪ್ರಧಾನಿಗೆ ರಕ್ಷಣೆ ಕೊಡದೆ ಭದ್ರತಾ ವೈಫಲ್ಯ ತೋರಿದೆ ಪಂಜಾಬ್‍ನಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡುವಂತೆ ರಾಷ್ಟ್ರಪತಿಗಳು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಸಂಸದ ಈರಣ್ಣ ಕಡಾಡಿ ಅವರು ಭದ್ರತೆಯನ್ನೇ ಬುಡಮೇಲು ಮಾಡಲು ಪ್ರಯತ್ನಿಸಿದ ಘಟನೆಯನ್ನ ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ.
IN MUDALGI Latest Kannada News