ಸಂಕ್ರಮಣಕ್ಕೆ ಪಂಚಮಸಾಲಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ-ಶ್ರೀ ಬಸವ ಜಯಮೃತ್ಯುಂಜಯ ಸಾಮೀಜಿ
ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ 2ಎ ಮೀಸಲಾತಿ ಆಗ್ರಹಿಸಿ ನಡೆಸಿದ ಪಾದಯಾತ್ರೆಯ 1ನೇ ವರ್ಷಾಚರಣೆ ಹಿನ್ನಲೆಯಲ್ಲಿ ಪಂಚಮಸಾಲಿಗಳ ಜಾಗರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ಜನೇವರಿ 14 ರಂದು ಕೂಡಲಸಂಗಮದ ಪೀಠದಲ್ಲಿ ಜರುಗಲಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸಾಮೀಜಿ ಕರೆ ನೀಡಿದರು.
ಶುಕ್ರವಾರ ಜ.07 ರಂದು ಕಲ್ಲೋಳಿ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ಸಮೀಕ್ಷಾ ಕಾರ್ಯವನ್ನು ನಡೆಸುತ್ತಿರುವುದು ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.
ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಲಕ್ಷಾಂತರ ಸಮಾಜ ಬಾಂಧವರು ಬಂದು ಅಭೂತಪೂರ್ವ ಬೆಂಬಲ ನೀಡಿ ಯಶಸ್ವಿಗೊಳಸಿದ್ದಾರೆ. ಅವರೆಲ್ಲರ ಸಹಕಾರದಿಂದ ಹೋರಾಟಕ್ಕೆ ಕೆಲವೇ ದಿನಗಳಲ್ಲಿ ಪ್ರತಿಫಲ ದೊರೆಯಲಿದೆ. ಜ. 14 ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಿಸುವ ಭರವಸೆ ಇದೆ ಎಂದರಲ್ಲದೇ ಕಿತ್ತೂರು ಕರ್ನಾಟಕದ 7 ಜಿಲ್ಲೆಗಳನ್ನು ಒಳಗೊಂಡ ಯುವ ಪಂಚ್ಯಸೈನ್ಯ ಸಮಾವೇಶವನ್ನು ಬರುವ ದಿನಗಳಲ್ಲಿ ಕಲ್ಲೋಳಿಯಲ್ಲಿ ನಡೆಸಲು ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕ ಪಂಚ್ಯಸೈನ್ಯ ಅಧ್ಯಕ್ಷರನ್ನಾಗಿ ಘೂಳಪ್ಪ ವಿಜಯನಗರ, ಕಲ್ಲೋಳಿ ಯುವಘಟಕದ ಅಧ್ಯಕ್ಷರನ್ನಾಗಿ ಧರೀಶ ಖಾನಗೌಡ್ರ ನೇಮಕ ಮಾಡಲಾಯಿತು.
ಶಂಕರ ಬೆಳಕೂಡ ಅಧ್ಯಕ್ಷತೆ ವಹಿಸಿದ್ದರು, ಬಿಡಿಸಿಸಿ ನಿರ್ದೇಶಕ ಪಂಚಮಗೌಡ ದ್ಯಾಮನಗೌಡ, ಬಸವರಾಜ ಕಡಾಡಿ, ಅಜೀತ ಬೆಳಕೂಡ, ರಾವಸಾಹೇಬ ಬೆಳಕೂಡ, ಆರ್.ಟಿ. ಪಾಟೀಲ, ಸೋಮನಗೌಡ ಪಾಟೀಲ, ಮೂಡಲಗಿ ತಾಲೂಕ ಘಟಕ ಅಧ್ಯಕ್ಷ ಬಸಗೌಡ ಪಾಟೀಲ, ನಿಂಗಪ್ಪ ಪಿರೋಜ್, ಪ್ರಭು ಕಡಾಡಿ, ಹಣಮಂತ ಸಂಗಟಿ, ಉಮೇಶ ಬಿ.ಪಾಟೀಲ, ಶಂಭು ಖಾನಾಪೂರ, ಶಿವಾನಂದ ಹೆಬ್ಬಾಳ, ಮಲ್ಲಪ್ಪ ಕುರಬೇಟ, ಭೀಮಶಿ ಹೆಬ್ಬಾಳ, ಬಾಳಪ್ಪ ಮಟಗಾರ, ಪುಟ್ಟು ಹುಕ್ಕೇರಿ, ಮಲ್ಲು ಹೆಬ್ಬಾಳ, ಭೀಮರಾಯ ಕಡಾಡಿ, ಶಿವಾನಂದ ಕಡಾಡಿ, ಪರಪ್ಪ ಕಡಾಡಿ, ಕಿರಣ ಕಡಾಡಿ, ಶ್ರೀಶೈಲ ಕಡಾಡಿ, ಭೀಮಶಿ ಖಾನಾಪೂರ, ಸಿದ್ದಪ್ಪ ಮುಗಳಿ ಸೇರಿದಂತೆ ಅನೇಕರು ಉಪಸ್ಥಿರಿದ್ದರು.
ಮಹಾದೇವ ಮದಭಾಂವಿ ನಿರೂಪಿಸಿದರು. ಹಣಮಂತ ಕೌಜಲಗಿ ಪ್ರಸ್ತಾವಿಕವಾಗಿ ಮಾತನಾಡಿದರು.