ಕಬ್ಬಿನ ಬೆಳೆಯಲ್ಲಿ ವೇಸ್ಟ ಡಿಕಾಂಪೊಸರ ಬಳಕೆಯಿಂದ ಹೆಚ್ಚಿನ ಇಳುವರಿ
ಮೂಡಲಗಿ : ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡು ಹೆಚ್ಚಿನ ಕಬ್ಬಿನ ಇಳುವರಿ ಪಡೆಯಲು ವೇಸ್ಟ್ ಡಿಕಾಂಪೊಸರ ಬಳಕೆ ಮಾಡಬೇಕು ಎಂದು ರೇಣುಕಾ ಶುಗರ್ಸನ ಎಜಿಎಮ್ ಎಮ್ ಜಿ ಮಲಗೌಡನವರ ಹೇಳಿದರು.
ಅವರು ಬಡಿಗವಾಡ ಗ್ರಾಮದ ಗ್ರಾಮದ ಪ್ರಕಾಶ ಕಮತೆ ಅವರ ತೋಟದಲ್ಲಿ ರೇಣುಕಾ ಶುಗರ್ಸ್ ಹಾಗೂ ಸೋಲಿಡರಿಡಾಡ ಸಂಸ್ಥೆಯ ಸಹಬಾಗಿತ್ವದಲ್ಲಿ ಕಬ್ಬಿನ ಬೆಳೆಯ ಸುಸ್ಥಿರ ಬೇಸಾಯದ ಮಾಹಿತಿ ಅಡಿಯಲ್ಲಿ ಮಾಹಿತಿ ಸಭೆಯಲ್ಲಿ ರೈತರಿಗೆ ಪ್ರಾತ್ಯಕ್ಷತೆಯ ಮೂಲಕ ಮಾಹಿತಿ ನೀಡಿ 100ಕ್ಕೂ ಅಧಿಕ ರೈತರಿಗೆ ವೇಸ್ಟ ಡಿಕಾಂಪೊಸರ ಮಿಡಿಯಾ ಹೊಂದಿದ ಬಾಟಲ್ಗಳನ್ನು ವಿತರಿಸಿ ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ದೆಹಲಿಯ ಸೊಲಿಡರಿಡಾಡ ಸಂಸ್ಥೆಯ ಅಧಿಕಾರಿ ಸಂತೋಷ ಸಲಕೆ, ಕೇನ್ ಮ್ಯಾನೆಜರ ಎನ್ ವಾಯ್ ಮಾದರ, ವಿ ವಾಯ್ ಹಲಕಿ ಪ್ರಗತಿಪರ ರೈತರಾದ ಮುನೀರ ಖಾಜಿ, ಪ್ರಕಾಶ ಕಮತೆ ಹಾಗೂ ಅನೇಕ ರೈತರು ಗ್ರಾಮದ ಹಿರಿಯರು ಹಾಜರಿದ್ದರು.