ಮೂಡಲಗಿ: ಪಟ್ಟಣದಲ್ಲಿರುವ ಕಸಾಯಿ ಖಾನೆಗಳನ್ನು ಸ್ಥಾಳಾಂತರ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ ಡಿ.ಜಿ.ಮಹಾತ್ ಅವರಿಗೆ ಪಟ್ಟಣದ ಶ್ರೀ ಬಸವ ಸೇವಾ ಯುವಕ ಸಂಘದ ಕಾರ್ಯಕರ್ತರು ಸೋಮವಾರದಂದು ಮನವಿ ಸಲ್ಲಿಸಿದರು.
ಮೂಡಲಗಿ ಪಟ್ಟಣದಲ್ಲಿ ಕಸಾಯಿ ಖಾನೆಗಳಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದು, ಕಸಾಯಿ ಖಾನೆಗಳಿಂದ ಬರುತ್ತಿರುವ ತ್ಯಾಜ್ಯವಸ್ತು ಮೂಡಲಗಿ ಪಟ್ಟಣದ ಮಧ್ಯ ಬಾಗದಲ್ಲಿ ಹರಿಯುವ ಹಳ್ಳದ ನೀರಿನಲ್ಲಿ ಮಿಶ್ರಣವಾಗಿ ಪಟ್ಟಣದ ರುದ್ರ ಭೂಮಿ ಹತ್ತಿರ ಸುಣಧೋಳಿ ರಸ್ತೆಯಲ್ಲಿ ಸುತ್ತಮುತ್ತಲಿನ ರೈತರು ಮತ್ತು ವ್ಯಾಪಾರಿಗಳು, ಜನಸಾಮಾನ್ಯರು ಸಂಚರಿಸಲ್ಲು ಬಹಳ ತೊಂದರೆಯಾಗುತ್ತಿದೆ, ಈ ಹಿಂದೆ ಅನೇಕ ಬಾರಿ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗದಿರುವುದು ದುರದೃಷ್ಟಕರ ಸಂಗತಿ, ಮೂಡಲಗಿ ಪಟ್ಟಣವು ತಾಲೂಕ ಸ್ಥಳವಾಗಿದ್ದು, ಪಟ್ಟಣಕ್ಕೆ ದಿನೆ ದಿನೆ ಸುತ್ತಮೂತ್ತಲಿನ ಗ್ರಾಮದ ಜನತೆ ಬರುತ್ತಾರೆ, ಹೆಚ್ಚು ತ್ಯಾಜ್ಯ ವಸ್ತುಗಳನ್ನು ಹಳ್ಳಕ್ಕೆ ಎಸೆಯುವ ಕಾರಣ ಸರಿಯಾಗಿ ತ್ಯಾಜ್ಯವಸ್ತು ವೀಲೇವಾರಿತಯಾಗದೆಯಿರುವುದು ಮತ್ತು ಪಟ್ಟಣದಲ್ಲಿ ಎಲ್ಲಿ ನೋಡಿದರು ಚರಂಡಿಗಳಿಂದ ತೆಗೆದ ತ್ಯಾಜ್ಯವು ವಿಲೇವಾರಿಯಾಗದೆ ರಸ್ತೆ ಪಕ್ಕದಲ್ಲಿ ಇರುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚುವ ಸಂಭವ ಇರುತ್ತದೆ.
ಮೂಡಲಗಿ ಪಟ್ಟಣದಲ್ಲಿರುವ ಎಲ್ಲ ಕಸಾಯಿ ಖಾನೆಗಳನ್ನು ಬಂದಮಾಡಬೇಕು, ಪಟ್ಟಣದ ಮಧ್ಯ ಭಾಗದಲ್ಲಿ ಹರಿಯು ಹಳ್ಳದ ಸ್ವಚ್ಚತಾ ಕಾರ್ಯವನ್ನು ಹಲವು ವರ್ಷಗಳಿಂದ ಮಾಡದೇ ಇರುವುದರಿಂದ ಹಳ್ಳದಲ್ಲಿ ಬರುವ, ಕಸ, ಕಡ್ಡಿ. ಕಂಟಿ ಮತ್ತು ತ್ಯಾಜ್ಯ ವಸ್ತುಗಳಿಂದ ಹಳ್ಳದ ನೀರು ಕುಲಸಿತಗೊಂಡು ದುರ್ವಾಸನೆ ಬರುತ್ತಿದೆ ಕಾರಣ ಮನವಿಗೆ ಸ್ಪಂದಿಸಬೇಕೆಂದು ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಲ್ಲಾಗಿದೆ.
ಈ ಸಮಯದಲ್ಲಿ ಶ್ರೀ ಬಸವ ಸೇವಾ ಯುಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರಬಗಟ್ಟಿ, ಕಾರ್ಯದರ್ಶಿ ಉಮೇಶ ಶೆಕ್ಕಿ, ಈಶ್ವರ ಢವಳೇಶ್ವರ, ಶಿವಬೋಧ ಗೋಕಾಕ, ಸಿದ್ದು ಗೋಕಾಕ, ಬಸವರಾಜ ಶೆಕ್ಕಿ, ಮಲ್ಲು ಕುರುಬಗಟ್ಟಿ, ಮಲ್ಲ ಬಿಸನಕೋಪ್ಪ, ಸಂಗಮೇಶ ಗುರ್ಲಾಪೂರ, ಮಹಾಂತೇಶ ಪಿರೋಜಿ, ಚನ್ನಬಸು ನಿಡಗುಂದಿ, ಶ್ರೀಶೈಲ್ ಕೊಳವಿ, ಬಸವರಾಜ ಅಂಗಡಿ, ಮಲ್ಲಪ್ಪ ಯಾದವಾಡ, ಶಿವರಾಯ ಬಳಿಗಾರ ಮತ್ತಿತರಿದ್ದರು.