Breaking News
Home / Recent Posts / ದೇಶಾಭಿಮಾನದ ಕಿಚ್ಚು ಹೊತ್ತಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು

ದೇಶಾಭಿಮಾನದ ಕಿಚ್ಚು ಹೊತ್ತಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು

Spread the love

ಮೂಡಲಗಿ: ದೇಶಾಭಿಮಾನದ ಕಿಚ್ಚು ಹೊತ್ತಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುಷ್ಠಾನ ಅಧಿಕಾರಿ ಎಮ್.ಪಿ. ಮರನೂರ ಹೇಳಿದರು.


ಮೂಡಲಗಿ ಕರುನಾಡು ಸೈನೀಕ ತರಬೇತಿ ಕೇಂದ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಕರ್ನಾಟಕ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಕರುನಾಡು ಸೈನೀಕ ತರಬೇತಿ ಕೇಂದ್ರ, ಜನನಿ ಸಮಗ್ರ ಅಭಿವೃದ್ಧಿ ಸಂಸ್ಥೆ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಬಿವೃದ್ಧಿ ಸಂಘ ಹಳ್ಳೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಮೂಡಲಗಿ ತಾಲೂಕಾ ಮಟ್ಟದ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಬಹುಮಾನ ವಿತರಿಸಿ ಮಾತನಾಡಿದ ಅವರು ಸ್ವಸ್ಥ ಸಮಾಜಕ್ಕೆ ವಿವೇಕಾನಂದರ ಕೊಡುಗೆ ಅಫಾರವಾಗಿದೆ ಎಂದರು.


ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಯುವಕರಲ್ಲಿ ಹುಮ್ಮಸ್ಸು ತೇಜಸ್ಸು ರಾಷ್ಟ್ರೀಯ ಭಾವಕ್ಯತೆ ಜಾತ್ಯಾತೀತತೆ ಭಾವನೆಯನ್ನು ಹೊಂದಿ ಸಧೃಡ ರಾಷ್ಟವನ್ನು ಕಟ್ಟಬೇಕು. ನಮ್ಮ ದೇಶದ ಸಂಸೃತಿಯನ್ನು ಜಗತ್ತಿಗೆ ಸಾರಿ ಭಾರತವನ್ನು ವಿಶ್ವಕ್ಕೆ ಗುರುವಾಗಿಸಲು ಶ್ರಮಿಸಿದ ಸಿಡಿಲು ಸಂತ ಸ್ವಾಮಿ ವಿವೇಕಾನಂದರು ಎಂದು ಹೇಳಿದರು.

ಶ್ರೀಪಾದಭೋದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಸಪ್ಪಾ ಹೆಬ್ಬಾಳ ಮಾತನಾಡಿ ‘ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಯುವಕರು ಹೇಡಿಗಳಾಗಬಾರದು ನೀವು ಎಂದೂ ಪರಾವಲಂಬಿಗಳಲ್ಲ, ನಿಮ್ಮ ಬದುಕನ್ನು ನೀವೆ ರೂಪಿಸಿಕೊಳ್ಳಬೇಕೆಂದು ಯುವಕರಿಗೆ ಕರೆ ನೀಡಿದರು.
ಸಮಾಜ ಸೇವಾ ರತ್ನ ಪ್ರಶಸ್ತಿ ವಿಜೇತ ಆನಂದ ಸುಳ್ಳನವರ ಮಾತನಾಡಿ, ಸ್ವಾಮಿ ವಿವೇಕಾನಂದರು ನಕ್ಷತ್ರಗಳಲ್ಲಿ ಸೂರ್ಯನಿದ್ದಂತೆ, ಹಿಂತಹ ಮಹಾನ ನಾಯಕರ ಸ್ಮರಣೆ ದಿನ ನಿತ್ಯ ನಡೆಯಬೇಕು. ಯುವಕರು ದುಶ್ಚಟಗಳಿಗೆ ಮಾರು ಹೊಗದೇ ತಮ್ಮ ಯವ್ವನದ ಜೀವನವನ್ನು ಸುಂದರವಾಗಿ ಕಳೆಯಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕರುನಾಡು ಸೈನಿಕ ತರಬೇತಿ ಕೇಂದ್ರದ ಅದ್ಯಕ್ಷೆ ಸವಿತಾ ತುಕ್ಕನ್ನವರ ವಹಿಸಿ, ಸಾಧಕರಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ ನೀಡಿ, ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಗದೀಶ ಡೋಳ್ಳಿ, ಭವಾನಿ ದೇವರುಶಿ, ಶ್ರೀಯುತ ನಗಾರಿ, ಹಾಗೂ ಯುವ ಸಂಘಟನೆಗಳ ಪದಾದಿಕಾರಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಭಾಷಣ ಸ್ಪರ್ದೆ, ರಸ ಪ್ರಶ್ನೆ ಹಾಗೂ ರನ್ನಂಗ್ ಸ್ಪರ್ದೆಯಲ್ಲಿ ಪ್ರಥಮ, ದ್ವಿತಿಯ, ತೃತಿಯ ಬಂದಂತಾ ಯುವಕರಿಗೆ ಪ್ರಶಸ್ತಿ ಪತ್ರ ಹಾಗೂ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಬಹುಮಾನ ನೀಡಲಾಯಿತು. ಧರೆಪ್ಪಾ ಸುಳ್ಳನವರ ಸ್ವಾಗತಿಸಿದರು. ಕಸ್ತೂರಿ ದೊಡಮನಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ