ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರದಿಂದ ರಾಜ್ಯಕ್ಕೆ ರೂ 642.26 ಕೋಟಿ ಅನುದಾನ
ದೇಶಕ್ಕೆ ಅನ್ನ ನೀಡುವಂತಹ ತಾಕತ್ತು ರೈತ ಕುಲಕ್ಕೆ: ಸಂಸದ ಕಡಾಡಿ ಪ್ರಶಂಸೆ ವ್ಯಕ್ತಪಡಿಸಿದರು
ಮೂಡಲಗಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ರೂ. 642.26 ಕೋಟಿ ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸರ್ಕಾರಗಳಿಗಿಂತ ದೊಡ್ಡ ಪ್ರಮಾಣದ ಅನುದಾನವಾಗಿದೆ. ಇದನ್ನು ರೈತರು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ.
ಶನಿವಾರ ಜ.15 ರಂದು ಪತ್ರಿಕಾ ಹೇಳಿಕೆ ನೀಡಿದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದಂತೆ ನೀರು ಭಗವಂತ ಕೊಟ್ಟ ಪ್ರಸಾದ ಇದನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲು ಆಗುವುದಿಲ್ಲ. ನೈಸರ್ಗಿಕವಾಗಿ ಸಿಕ್ಕಂತ ಅತ್ಯಮೂಲ್ಯವಾದ ನೀರಿನ ಉಪಯೋಗವನ್ನು ಸರಿಯಾಗಿ ಮಾಡಿಕೊಳ್ಳಬೇಕು ಮತ್ತು ಅಂರ್ತಜಲ ಹೆಚ್ಚು ಮಾಡುವ ದೃಷ್ಠಿಯಿಂದ ನಾವು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಬೇಕಾಗಿದೆ ಎಂದರು.
ದೇಶಕ್ಕೆ ಅನ್ನನೀಡುವಂಂತಹ ರೈತನಿಗೆ ಬೇಕಾದದ್ದು ಆರೋಗ್ಯ ಪೂರ್ಣವಾದಂತಹ ಮಣ್ಣು, ಉತ್ತಮವಾದಂತಹ ನೀರು ಇವೆರಡು ಇದ್ದರೆ ಇಡಿ ದೇಶಕ್ಕೆ ಅನ್ನ ನೀಡುವ ತಾಕತ್ತು ರೈತ ಕುಲಕ್ಕೆ ಇದೆ. ಅದಕ್ಕೆ ನೀರು ಹೆಚ್ಚುವರಿಯಾಗಿ ಉಪಯೋಗವಾಗಿ, ವೇಸ್ಟ ಆಗಿ ಹೋಗಬಾರದು ಅನ್ನುವ ಕಾರಣದಿಂದ ಮತ್ತು ಹೆಚ್ಚು ನೀರು ಬಳುಸುವುದರಿಂದ ಉತ್ಪಾದನೆಗೆ ಹೊಡೆತ ಆಗುತ್ತದೆ ಜಮೀನು ಸವಳು ಜವಳು ಆಗುತ್ತವೆ. ಇವೆಲ್ಲವೂ ಮನಗಂಡು ಕಡಿಮೆ ನೀರಿನೊಳಗೆ ಹೆಚ್ಚು ಬೆಳೆ ತೆಗೆಯುವುದಕ್ಕೆ ಆದ್ಯತೆ ಕೊಡುವ ದೃಷ್ಠಿಯಿಂದ ಕೇಂದ್ರ ಸರ್ಕಾರ ಈ ಯೋಜನೆ ಮಾಡಿದೆ ಇದನ್ನು ರೈತ ಮೋರ್ಚಾ ರಾಜ್ಯ ಅಧ್ಯಕ್ಷನಾಗಿ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪರ್ ಡ್ರಾಪ್ ಮೋರ್ ಕ್ರಾಪ್ ಎನ್ನುವ ಕಲ್ಪನೆಯನ್ನು ಪ್ರದಾನಿ ನರೇಂದ್ರ ಮೋದಿ ಅವರು ನಮಗೆ ಕೊಟ್ಟಿದ್ದಾರೆ. ಒಂದೊಂದು ಹನಿ ನೀರಿನಲ್ಲಿಯೂ ಹೆಚ್ಚು ಬೆಳೆ ಬೆಳೆಯುವಂತಹ ಆಲೋಚನೆಯನ್ನು ನಾವೆಲ್ಲ ಜಾರಿಗೆ ತರಬೇಕಾಗಿದೆ. ಪರ್ ಡ್ರಾಪ್ ಮೋರ್ ಕ್ರಾಪ್ ಎನ್ನುವ ಕಲ್ಪನೆಯನ್ನು ಎಲ್ಲರೂ ಕಾರ್ಯಗತ ಮಾಡೋಣ ಎಂದು ಈರಣ್ಣ ಕಡಾಡಿ ಕರೆ ನೀಡಿದರು.