ಕ್ರೀಡೆ ದೇಹವನ್ನು ಸದೃಢಗೋಳಿಸುತ್ತದೆ-ಸೋನವಾಲ್ಕರ
ಮೂಡಲಗಿ: ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳಾದ ಕ್ರೀಡೆ, ಆಟ-ಓಟಗಳಲ್ಲಿ ಭಾಗವಹಿಸಬೇಕು. ಅವು ದೇಹವನ್ನು ಸದೃಢವಾಗಿಸುತ್ತವೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೇ ನಿರ್ಧೇಶಕ ಎಮ್.ಎಚ್.ಸೋನವಾಲ್ಕರ ಹೇಳಿದರು.
ಅವರು ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾರಂಭದಲ್ಲಿ ಸಂಸ್ಥೆಯಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ, ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರೀಮಠ, ಡಾ.ಎಮ್. ಕೆ.ಕಂಕಣವಾಡಿ, ಪ್ರೊ.ಎಸ್.ಬಿ.ಖೋತ, ಪ್ರೊ.ಎಸ್.ಜಿ.ನಾಯಿಕ, ಡಾ.ಎಸ್.ಎಲ್.ಚಿತ್ರಗಾರ, ಬಿ.ಕೆ.ಬಡಗಣ್ಣವರ, ವಾಯ್.ಎಸ್.ಭರಮನ್ನವರ, ಬಿ.ಎಸ್.ಕಂಬಾರ, ಎಲ್.ಬಿ.ಮನ್ನಾಪೂರ, ವೇಂಕಟೇಶ ಪಾಟೀಲ, ಎಸ್.ಬಿ.ಮಾಲೋಜಿ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಐದು ತಂಡಗಳು ಭಾಗವಿದ್ದವು. ಬಿ.ಎ.ಭಾಗ 1ರ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ, ಬಿ.ಎ.ಭಾಗ 2ರ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ, ಬಿ.ಎ.ಭಾಗ 3ರ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದುಕೊಂಡವು.