ಡಿಎಸ್‍ಎಸ್ ಸಂಯೋಜಕ ಸಂಘಟನೆಯ ಕುಂದುಕೊರತೆ ಸಭೆ
ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ (ಸಂಯೋಜಕ) ಸಂಘಟನೆಯ ಸಂಘಟನಾತ್ಮಕ ಸಭೆ ಮತ್ತು ಕಾರ್ಯರ್ತರ ಕುಂದಕೊರತೆಗಳ ಸಭೆಯನ್ನು ಸ್ಥಳೀಯ ಅಂಬೇಡ್ಕರ ಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಮಾದರ ಮಾತನಾಡಿ, ದಲಿತ ಸಮುದಾಯದವರು ಪ್ರತಿ ಗ್ರಾಮದಲ್ಲಿ ಸಂಘಟನೆ ಮಾಡುವದರ ಜೊತೆಗೆ ಸರಕಾರದ ಸೌಲಭ್ಯಗಳನ್ನು ಸಮಾಜದ ಅತ್ಯಂತ ಕಡು ಬಡವರಿಗೆ ದೊರೆಯುಂತೆ ಮಾಡಬೇಕು.ದಲಿತರು ಇನ್ನೋಬ್ಬರಿಗೆ ಆಸೆ ಪಡದೆ ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಸಂಘಟನೆಯ ಮಹಿಳಾ ಪದಾಧಿಕಾರಿ ಸುನಂದಾ ಭಜಂತ್ರಿ ಮಾತನಾಡಿದರು.
ಈ ಸಂದರ್ಭದಲ್ಲಿ ಯಶವಂತ ಮಂಟೂರ, ಅಶೋಕ ಬಗನ್ಯಾರ, ನಾಗಪ್ಪ ಕರಬನ್ನವರ, ದುರಗಪ್ಪ ದಂಡಿನವರ, ಮಂಜು ಹರಿಜನ, ಮಹಾಲಿಂಗ ಮಾದರ, ಹಣುಮಂತ ಕರಬನ್ನವರ, ತಾಯವ್ವಾ ಕುಬಸಗಾರ ಇದ್ದರು.