Breaking News
Home / Recent Posts / ಯಾದವಾಡ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕೋತ್ಸವ

ಯಾದವಾಡ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕೋತ್ಸವ

Spread the love

ಯಾದವಾಡ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕೋತ್ಸವ

ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ಪ್ರಗತಿ ಪಥದತ್ತ ಸಾಗಲು ಸಂಘದ ಶೇರುದಾರ ಮತ್ತು ಠೇವುದಾರರ ವಿಶ್ವಾಸ ಮತ್ತು ಸಹಕಾರ ಬಹಳ ಮುಖ್ಯವಾದದು, ಪ್ರಗತಿ ಮಹಿಳಾ ಸಹಕಾರಿ ಸಂಘ ಶೇರುದಾರ ಮತ್ತು ಠೇವುದಾರ ಸಹಕಾರದಿಂದ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು.

ಅವರು ಶನಿವಾರದಂದು ಮೂಡಲಗಿ ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕೋತ್ಸವ ನಿಮಿತ್ಯವಾಗಿ ಶ್ರೀ ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷೆ ಸರೋಜಿನಿ ಯ.ನ್ಯಾಮಗೌಡರ ಅವರು ಸಂಘ ಸಾಲ ಸೌಲಭ್ಯಗಳನ್ನು ಮಾಹಿತಿ ಮತ್ತು ಬೆಳವಣಿಗೆಯನ್ನು ವಿವರಿಸಿ ಸಹಕಾರಿ ಸಂಘದ ಶೇರುದಾರರಿಗೆ ಲಾಭಾಂಶ ವಿತರಿಸಲಾಗಿದೆ ಎಂದವರು ಸಂಘದಿಂದ ಹೈನುಗಾರಿಕೆ, ವ್ಯಾಪಾರಸ್ಥರಿಗೆ ವಿವಿಧ ತೆರನಾದ ಸಾಲ ಪಡೆದುಕೊಂಡ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.
ಸಮಾರಂಭದಲ್ಲಿ ಸಂಘದ ನಿರ್ದೇಶಕಿಯರಾದ ಭಾರತಿ ಮ.ಅಂಬಲಿಮಠ, ವಿದ್ಯಾಶ್ರೀ ಕೃ.ಕೇರಿ, ಮಹಾದೇವಿ ಅ.ರೊಡಗಿ, ಲಕ್ಷ್ಮೀ ಶಿ.ಪಾಟೀಲ, ಡಾ.ಸ್ವಾತಿ ಶಿ.ಹಿರೇಮಠ, ಶೋಭಾ ವಿ.ದಳವಾಯಿ, ಪಾರ್ವತಿ ಲ.ದಾಸರ, ಮಹಾಲಕ್ಷ್ಮೀ ಮೋ.ಬಡಿಗೇರ, ಕಸ್ತೂರಿ ಕರಿಯಪ್ಪ ದಡ್ಡೆನ್ನವರ, ಲಕ್ಷ್ಮೀ ವಿ.ಬಡಿಗೇರ,ಸಂಘದ ವ್ಯವಸ್ಥಾಕಿ ಅಶ್ವಿನಿ ಈ ತಿಪ್ಪಾ, ಮಾಳಪ್ಪ ದಳವಾಯಿ ಮತ್ತಿತರು ಇದ್ದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ