ಸತೀಶ ಶುಗರ್ಸದಲ್ಲಿ 73ನೇ ಗಣರಾಜ್ಯೋತ್ಸವ, ಪ್ರಗತಿಪರ ರೈತರಿಗೆ ಸನ್ಮಾನ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಹತ್ತಿರದ ಸತೀಶ ಶುಗರ್ಸ ಕಾರ್ಖಾನೆಯಲ್ಲಿ ಬುದವಾರ ಜರುಗಿದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಅತಿ ಹೆಚ್ಚು ಕಬ್ಬು ಪೂರೈಸಿದ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಖಾನೆಯಲ್ಲಿನ 73ನೇಯ ಗಣರಾಜ್ಯೋತ್ಸವ ಧ್ವಜಾರೋಹನ ನೇರವೇರಿಸಿದ ಪ್ರಗತಿಪರ ರೈತರಾದ ಬಡಿಗವಾಡದ ಪರಸಪ್ಪಾ ಯಲ್ಲಪ್ಪಾ ಕುಡ್ಡಗೋಳ ಮತ್ತು ಮಕ್ಕಳಗೆರಿಯ .ನಾಗರಾಜ ತುಕಾರಾಮ ಕಾಗಲ ಸತ್ಕರಿಸಿ ಗೌರವಿಸಿದರು.
ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ.ಹಿರೇಮಠ ಮಾತನಾಡಿ, ಕಳೆದ ಕೆಲವು ವಾರಗಳಲ್ಲಿ ಕೊರೋನ ವೈರಸ್ ಓಮಿಕ್ರಾನ್ ಹೊಸ ರೂಪಾಂತರ ಪ್ರಕರಣಗಳು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ 73ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು ಎಂದರು.
ಇನ್ನೋರ್ವ ಕಾರ್ಖಾನೆಯ ಉಪಾಧ್ಯಕ್ಷ ವಿ.ಎಮ್.ತಳವಾರ ಮಾತನಾಡಿ, ಭಾರತ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ನಮ್ಮ ಜಿವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾರ್ಖಾನೆಯ ಅಧಿಕಾರಿಗಳಾದ ಹಣಕಾಸು ಅಧಿಕಾರಿ ಡಿ.ಆರ್.ಪವಾರ, ಮಾನವ ಸಂಪನ್ಮೂಲ ಅಧಿಕಾರಿ ಅಶೋಕ ಅಲಕರಣಿ, ಕಬ್ಬು ಅಭಿವೃದಿ ವಿಭಾಗ ಅಧಿಕಾರಿ ಮಲ್ಲಿಕಾರ್ಜುನ ಸಸಾಲಟ್ಟಿ, ಸುಭಾಸ ಕೊಟಗಿ ಮತ್ತು ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಕಾರ್ಮಿಕ ಸಿಬ್ಬಂದಿಯವರು ಮತ್ತು ರೈತಬಾಂಧವರು ಉಪಸ್ಥಿತರಿದರು.