Breaking News
Home / Recent Posts / ಜ್ಞಾನದ ಹಸಿವು ಇದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ-ಸಂಸದ ಈರಣ್ಣ ಕಡಾಡಿ

ಜ್ಞಾನದ ಹಸಿವು ಇದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ-ಸಂಸದ ಈರಣ್ಣ ಕಡಾಡಿ

Spread the love

ಜ್ಞಾನದ ಹಸಿವು ಇದ್ದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ-ಸಂಸದ ಈರಣ್ಣ ಕಡಾಡಿ

ಮೂಡಲಗಿ: ಜ್ಞಾನದ ಹಸಿವು ಇದ್ದವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ, ಗ್ರಾಮೀಣ ಪ್ರದೇಶದ, ಅದರಲ್ಲೂ ರೈತನ ಮಕ್ಕಳು ಪಿ.ಎಸ್.ಆಯ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಒಳ್ಳೆಯ ಸಾಧನೆ ಮಾಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.


ರವಿವಾರ ಜ.30 ರಂದು ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಸಕ್ರೆಪ್ಪಗೋಳ ತೋಟದಲ್ಲಿ ರಾಯಬಾಗ ತಾಲೂಕಿನ ಇಟನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಕಿರಿಯ ಸಹೋದರ ಪ್ರಶಾಂತ ಬೆನ್ನಳ್ಳಿ ಸಹೋದರರಿಬ್ಬರು ಸನ್ಮಾನಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಪಿ.ಎಸ್.ಆಯ್ ಹುದ್ದೆಗೆ ಆಯ್ಕೆಯಾಗಿರುವು ಖುಷಿಯ ಸಂಗತಿ ಎಂದರು.


ನಮ್ಮಲ್ಲಿ ಸಾಧಿಸುವ ಉತ್ಕಟ ಬಯಕೆ ಇರಬೇಕು. ಆ ಬಯಕೆ ನಮ್ಮನ್ನು ಸಾಧನೆಯೆಡೆಗೆ ಕೊಂಡೊಯ್ಯುತ್ತದೆ. ಸರ್ಕಾರಿ ಕೆಲಸ ಪಡೆಯಲು ಎಲ್ಲರೂ ಸಮಾನ ಅವಕಾಶವನ್ನು ಹೊಂದಿರುತ್ತಾರೆ. ಜ್ಞಾನವನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಸತತ ಪ್ರಯತ್ನದಿಂದ ಸರ್ಕಾರಿ ಹುದ್ದೆಯನ್ನು ಪಡೆಯಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ರನ ಬೆಳಗಲಿ ಸಿದ್ದಾರೂಢ ಮಠದ ಪೂಜ್ಯಶ್ರೀ ಸಿದ್ದಾರೂಡ ಶಿವಯೋಗಿಗಳು, ಪೂಜ್ಯಶ್ರೀ ಮಾರುತಿ ಶರಣರು, ಪೂಜ್ಯಶ್ರೀ ಮೈಲಾರಲಿಂಗೇಶ್ವರ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಶ್ರದ್ದಾ ಸುರೇಶ ಅಂಗಡಿ, ಆರ್. ಎಂ. ಪಾಟೀಲ, ಶಿವಪ್ಪ ಹೊಸಮನಿ, ಪರಸಪ್ಪ ಬಬಲಿ, ಆರ್.ಟಿ.ಒ. ಮರಲಿಂಣ್ಣವರ, ಬಾಳೇಶ ಸಕ್ರೆಪ್ಪಗೋಳ, ಸುಭಾಸ ಪಾಟೀಲ, ಆನಂದ ಮೂಡಲಗಿ, ರಾಜು ಸಕ್ರೆಪ್ಪಗೋಳ, ಸೇರಿದಂತೆ ಪಟ್ಟಣ ಪಂಚಾಯತ ಸದಸ್ಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ