Breaking News
Home / Recent Posts / ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ – ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೋಡ

ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ – ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೋಡ

Spread the love

ಮೂಡಲಗಿ: ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ ಎಂದು ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೋಡ ಹೇಳಿದರು. ಅವರು ವಡೇರಹಟ್ಟಿ ಗ್ರಾಮದಲ್ಲಿ   ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘ ವಡೇರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಲಗಿ ತಾಲೂಕಾ ಮಟ್ಟದ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಬಹುಮಾನ ವಿತರಿಸಿ ಮಾತನಾಡಿದ ಅವರು ಹೆಣ್ಣಿರಲಿ ಗಂಡಿರಲಿ ಮನೆಗೊಂದು ಕ್ರೀಡಾಪಟು ಇರಲಿ. ಆಟದಲ್ಲಿ ಸೋಲು ಗೆಲುವು   ಒಂದು ನಾಣ್ಯದ  ಎರಡು ಮುಖಗಳಿದ್ದಂತೆ ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ದಿನನಿತ್ಯದ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಬೆಳೆಸಲು ಭಾರತ ಸರ್ಕಾರದ ನೆಹರು ಯುವ ಕೇಂದ್ರ ಮಾಡುವಂಥ ಕಾರ್ಯಚಟುವಟಿಕೆಗಳು ಯುವ ಚಟುವಟಿಕೆಗಳ ಕಾರ್ಯಕ್ರಮಗಳ ಕಾರ್ಯ ನಿಜವಾಗಲೂ ಶ್ಲಾಘನೀಯವಾಗಿದೆ ಕ್ರೀಡಾ ಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಯುವ ಮುಖಂಡರಾದ ಅಜಿತ ಪಾಟೀಲ ಮಾತನಾಡಿ ಯುವ ಸಂಘಟನೆಗಳು ಜಿಲ್ಲೆಯಾದ್ಯಂತ ಮಾಡುವ ಕಾರ್ಯಗಳು ಉತ್ತಮವಾಗಿವೆ. ಒಂದು ಕಾರ್ಯಕ್ರಮ ಆಗಬೇಕಾದರೆ ಊರಿನ ಗುರುಹಿರಿಯರ ಸಹಕಾರ ಅತಿ ಅವಶ್ಯಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಊರಿನ ಹಿರಿಯರಾದ ಕಾಣಪ್ಪ ಹೊಳ್ಕರ ವಹಿಸಿದ್ದರು. ಪ್ರಥಮದಲ್ಲಿ ಉದ್ಘಾಟನೆಯನ್ನು ಗುರು ಹಿರಿಯರು ಗಣ್ಯರು ಸಸಿಗೆ ನೀರುಣಿಸುವ ಮೂಲಕ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗ್ರಾಮ ಪಂಚಾಯತ ಸದಸ್ಯರಾದ ರೆಭೋಜಿ ಮಳಿವಡೆಯರ ಉದ್ಘಾಟಿಸಿದರು.

ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ವಿಠ್ಠಲ ಪಾಟೀಲ ಸಿದ್ದರಾಮ ಮಾಮಗೌಡ್ರ ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೋಡ ನೂತನ ಪಿಎಸ್ಐ ಆಗಿ ಆಯ್ಕೆಯಾದ ಗೀತಾ ಪೂಜಾರಿ ಕವಿರತ್ನ ಕಾಳಿದಾಸ ಪ್ರಶಸ್ತಿ ಪುರಸ್ಕೃತರಾದ ಸಿದ್ದಣ್ಣ ದುರದುಂಡಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಗುಡಸಿ ಜಿಲ್ಲಾ ರೈತ ಸಂಘದ ಸಂಚಾಲಕ ಮಹಾದೇವ ಗುಡೇರ ಸಂಘಟಕ ರಾಘವೇಂದ್ರ ದೊಡವಾಡ ಡಾ. ಎ ಜಿ ಪಾಟೀಲ ಸಿದ್ದಾರೂಢ ಬೀರನಗಡ್ಡಿ ಬಾಲಚಂದ್ರ ಪೂಜಾರಿ ಗೋಪಾಲ ಬೀರನಗಡ್ಡಿ ಸುರೇಶ ಕುದರಿ ರುದ್ರಗೌಡ ಪಾಟೀಲ ಪರಸಪ್ಪ ಸಾರಾಪುರ ಸುರೇಶ ಮಕರದ ಮಲ್ಲಿಕಾರ್ಜುನ ಮಾಳಗಿ ಹನುಮಂತ ಮದನವರ ಸಿದ್ದರಾಮ ಡೊಳ್ಳಿ ರವಿವರ್ಮ ಹಾಗೂ ಸಂಘಟಿಕರು ಮುಂತಾದವರು ಉಪಸ್ಥಿತರಿದ್ದರು.

ಪ್ರಥಮ ಬಹುಮಾನ ಕಂಕನವಾಡಿ ತಂಡ

ದ್ವಿತೀಯ ಬಹುಮಾನ ಲೋಳಸೂರ ತಂಡ

ತೃತೀಯ ಬಹುಮಾನ ಹಳ್ಳೂರ ತಂಡ

ಚತುರ್ಥ ಬಹುಮಾನ ಸುಲ್ತಾನಪುರ ತಂಡ ಪಡೆದುಕೊಂಡ ತಂಡಕ್ಕೆ ನಗದು ಬಹುಮಾನ ಪ್ರಶಸ್ತಿ ಪತ್ರ ಆಕರ್ಷಕ ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ