Breaking News
Home / Recent Posts / ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

Spread the love

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ಮುಡಲಗಿ: ತಾಲೂಕಿನ ವಡೇರಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಸುಣಧೋಳಿಯಲ್ಲಿ ಹಮ್ಮಿಕೊಂಡಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಎಸ್.ಐ.ಭಾಗೋಜಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದಿಂದ ಕಲಿತ ಪಾಠವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ಪ್ರೇರೆಪಿಸಿದ ಅವರು ಶಿಬಿರಕ್ಕೆ ಸಹಾಯ ಸಹಕಾರ ನೀಡಿದ ಶ್ರೀ ಶಿವಾನಂದ ಶ್ರೀಗಳನ್ನು ಸುಣಧೋಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಸುರೇಶ ಲಂಕೆಪ್ಪನವರ ಮಾತನಾಡಿ, ಶಿಬಿರದಲ್ಲಿರುವ ಅವಕಾಶ ಉಳಿದ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸುದೈವಿಗಳು, ಶಿಬಿರದಲ್ಲಿನ ಶಿಸ್ತು ತಮ್ಮ ಜೀವನವನ್ನು ಉಜ್ವಲಗೊಳಿಸುತ್ತದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ ಸುಣಧೋಳಿ ಜಡಿಸಿದ್ಧೇಶ್ವರ ಮಠದ   ಶ್ರೀಗಳು ಮಾತನಾಡಿ, ಎನ್.ಎಸ್.ಎಸ್ ಶಿಬಿರದ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಆಶಿರ್ವಚನ ನೀಡಿದರು.
ಸಮಾರಂಭದಲ್ಲಿ ಎಸ್.ಡಿ.ವಾಲಿ, ಎನ್.ಎಸ್.ಎಸ್.ಸಂಯೋಜನಾಧಿಕಾರಿ ಕೆ.ಬಿ.ಬೆಳಗಲಿ ವಾಯ್.ಎಲ್.ಶೇಖರಗೋಳ, ಎಲ್.ಎಸ್.ವಾರೆಪ್ಪಗೋಳ, ಕೆ.ಎಮ್.ಉಪ್ಪಾರ, ಮುಖ್ಯೋಪಾಧ್ಯಾಯ ಸುಭಾಸ ಭಾಗೋಜಿ, ಕೌಜಲಗಿ, ಪಿಡಿಒ ಗಂಗಾಧರ ಮಲ್ಹಾರಿ, ಮತ್ತಿತರು ಇದ್ದರು.
ಡಾ|| ಎ.ವ್ಹಿ.ಮೆಳವಂಕಿ ಸ್ವಾಗತಿಸಿದರು, ವ್ಹಿ.ಬಿ.ಜೋಡಟ್ಟಿ ನಿರೂಪಿಸಿದರು, ಎಮ್.ಜಿ.ದೇವಡಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ