ಮೂಡಲಗಿ: ಶಿಸ್ತು, ಸಂಯಮ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜಾಗೃತಿ, ಆರೋಗ್ಯದ ಕಾಳಜಿಯಲ್ಲಿ ಸ್ಕೌಟ ಮತ್ತು ಗೈಡ್ಸ್ ಘಟಕದ ಚಟುವಟಿಕೆಗಳು ಅತ್ಯುಪಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಸಮೀಪದ ದುರದುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಭಾರತ ಸ್ಕಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ ಹಾಗೂ ತಾಲೂಕಾ ಮಟ್ಟದ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಉನ್ನತ ವಿಚಾರ ಧಾರೆಗಳನ್ನಿಟ್ಟುಕೊಂಡು ಲಾರ್ಡ್ ಬೆಡನ್ ಪಾವೆಲ್‌ರ ಜನ್ಮದಿನಾಚರಣೆ ಪ್ರಯುಕ್ತ ರ‍್ಯಾಲಿ ಹಮ್ಮಿಕೊಂಡಿರುವದು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಜೊತೆಯಲ್ಲಿ ಸಾಮಾಜಿಕ ಅರಿವುಂಟಾಗಲು ಮಾಡಿರುವದಾಗಿದೆ. ಮೂಡಲಗಿ ಮತ್ತು ಗೋಕಾಕ ಶೈಕ್ಷಣಿಕ ತಾಲೂಕಿನಲ್ಲಿ ಭಾರತ ಸೇವಾದಳವು ಕರ್ಮ ಭೂಮಿಯಾಗಿದೆ. ಪ್ರಸಕ್ತ ದಿನಗಳಲ್ಲಿ ಸ್ಕೌಟ್ ಮತ್ತು ಗೈಡ್ಸ್ ಅತೀ ಹೆಚ್ಚು ಘಟಕಗಳು ಇರುವದು ಮೂಡಲಗಿ ಶೈಕ್ಷಣಿಕ ವಲಯದಲ್ಲಿರುವದು ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕರು ಪಾಲಕ ಪೋಷಕರು ವಿದ್ಯಾರ್ಥಿಗಳಿ ಶಿಸ್ತು, ಆರೋಗ್ಯ ಕಾಳಜಿ, ಧೈರ್ಯ ಮತ್ತು ಸಾಹಸದ ಕೆಲಸ ಕಾರ್ಯಗಳಿಗೆ ಪ್ರೇರೆಪಿತರಾಗಲು ಇಂತಹ ಘಟಕಗಳ ಅವಶ್ಯಕತೆ ಇರುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಾರ್ಡ್ ಬೆಡನ್ ಪಾವೆಲ್‌ರ ಜನ್ಮದಿನಾಚರಣೆ, ರ‍್ಯಾಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಈ ಸಂದರ್ಭದಲ್ಲಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ದೈಹಿಕ ಶಿಕ್ಷಣ ಪರೀವಿಕ್ಷಕ ಜುನೇದಿ ಪಟೇಲ್, ಮಾಜಿ ತಾಪಂ ಸದಸ್ಯೆ ಸುಮಿತ್ರಾ ಅಂತರಗಟ್ಟಿ, ಪ್ರಧಾನ ಗುರು ಎಮ್.ಕೆ ಉಪ್ಪಾರ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ಅಂತರಗಟ್ಟಿ, ಉಪಾದ್ಯಕ್ಷ ಬಸಪ್ಪ ಒಬ್ಬಟಗಿ, ಸ್ಥಳೀಯ ಘಟಕದ ಅಧ್ಯಕ್ಷ ಅವ್ವಣ್ಣಾ ಬಂದಿ, ಜ್ಯೂನಿಯರ್ ಬೆಡನ್ ಪವೆಲ್ ವಿ.ಎ ಸಾತಪೂತೆ, ಸಂಪನ್ಮೂಲ ವ್ಯಕ್ತಿ ಟಿ.ವಿ ಗುದಗಾಪೂರ ಹಾಗೂ ಗ್ರಾಪಂ ಸದಸ್ಯರು, ಸ್ಕೌಟ್ ಮತ್ತು ಗೈಡ್ಸ್ನ ಮಾರ್ಗದರ್ಶಿ ಶಿಕ್ಷಕರು ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು