Breaking News
Home / Recent Posts / ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ, ಅವಗುಣಗಳನ್ನು ತ್ಯಜಿಸಿ ಜೀವನ ಸುಂದರವಾಗಿಸಿಕೊಳ್ಳಿರಿ

ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ, ಅವಗುಣಗಳನ್ನು ತ್ಯಜಿಸಿ ಜೀವನ ಸುಂದರವಾಗಿಸಿಕೊಳ್ಳಿರಿ

Spread the love

ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ

ಅವಗುಣಗಳನ್ನು ತ್ಯಜಿಸಿ ಜೀವನ ಸುಂದರವಾಗಿಸಿಕೊಳ್ಳಿರಿ

ಮೂಡಲಗಿ: ‘ಮನುಷ್ಯ ತನ್ನಲ್ಲಿಯ ಅವಗುಣಗಳನ್ನು ತ್ಯಜಿಸಿ ಉತ್ತಮ ಆಚಾರ, ವಿಚಾರಗಳ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಮಂಗಳವಾರ ಆಚರಿಸಿದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಭಕ್ತಿಯಿಂದ ಮಾಡುವ ಧ್ಯಾನವು ಪರಮಾತ್ಮನ ಕೃಪೆಗೆ ಪಾತ್ರವಾಗುತ್ತದೆ ಎಂದರು.
ಭಕ್ತಿ ಮತ್ತು ಧ್ಯಾನವು ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಡುವುದಲ್ಲದೆ, ಒತ್ತಡಗಳಿಂದ ಮುಕ್ತಯಾಗುತ್ತದೆ. ಶಿವನನ್ನು ಸ್ತುತಿಸುವ ಮೂಲಕ ಶಿವರಾತ್ರಿ ಆಚರಿಸಿ ಬದುಕಿನಲ್ಲಿ ಬೆಳಕನ್ನು ಕಾಣಬೇಕು ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಭಕ್ತರೊಂದಿಗೆ ಈಶ್ವರಿ ವಿಶ್ವವಿದ್ಯಾಲಯದ ಧ್ವಜಾರೋಹಣವನ್ನು ನೆರವೇರಿಸಿದರು.
ಬ್ರಹ್ಮಕುಮಾರಿ ಸವಿತಾ ಅಕ್ಕನವರು, ಶಿವಪುತ್ರಯ್ಯ ಮಠಪತಿ, ಜಿ.ಕೆ. ಮುರಗೋಡ, ವೈ.ಬಿ. ಕುಲಿಗೋಡ, ಬಶೆಟ್ಟೆಪ್ಪ ಗಾಡವಿ, ಗೋಪಾಲ ಗಂಗರಡ್ಡಿ, ಮಲ್ಲಿಕಾಜಪ್ಪ ಎಮ್ಮಿ, ಅಡಿವೆಪ್ಪ ತುಪ್ಪದ, ಸುಮಿತ್ರಾ ಸೋನವಾಲಕರ, ಮಹಾದೇವಿ ತಾಂವಶಿ, ಜಯಶ್ರೀ ಸೋನವಾಲಕರ, ಕವಿತಾ ಸೋನವಾಲಕರ, ಸುಧಾ ಶೀಲವಂತ, ಗೀತಾ ಸೋನವಾಲಕರ, ರಜನಿ ಬಂದಿ, ಮಹಾನಂದಾ ತಾಂವಶಿ, ಮಂಗಲ ಬಡ್ಡಿ, ವೀಣಾ ಗಾಡವಿ ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ