Breaking News
Home / Recent Posts / ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಮಹಿಳಾ ದಿನಾಚರಣೆ ‘ವರ್ಷದುದ್ದಕ್ಕೂ ಮಹಿಳಾ ದಿನಾಚರಣೆಯಾಗಿರುತ್ತದೆ’

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಮಹಿಳಾ ದಿನಾಚರಣೆ ‘ವರ್ಷದುದ್ದಕ್ಕೂ ಮಹಿಳಾ ದಿನಾಚರಣೆಯಾಗಿರುತ್ತದೆ’

Spread the love

ಮೂಡಲಗಿ: ‘ಮಹಿಳಾ ದಿನಾಚರಣೆಯು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರುವುದಿಲ್ಲ. ವರ್ಷದುದ್ದಕ್ಕೂ ಮಹಿಳಾ ದಿನಾಚರಣೆಯಾಗಿರುತ್ತದೆ’ ಎಂದು ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಶಿವಬೋಧರಂಗ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಮಹಿಳೆಯರ ಉಚಿತ ಮಧುಮೇಹ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಂದ ಕುಟುಂಬ ಮತ್ತು ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸಿರುತ್ತದೆ ಎಂದರು.
ಮಹಿಳೆಯರಿಂದ ಸಂಸ್ಕಾರ, ಸಂಪ್ರದಾಯ ಹಾಗೂ ಸಂಸ್ಕøತಿ ಉಳಿಯುವುದರಿಂದ ಸಮಾಜದಲ್ಲಿ ಮಹಿಳೆಯರ ಜವಾಬ್ದಾರಿ ಪ್ರಮುಖವಾಗಿದೆ. ಮಹಿಳೆಯರು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ಆಧ್ಯಾತ್ಮಿಕ ಚಿಂತನೆ ಮಾಡುವ ಮೂಲಕ ಮಹಿಳೆಯರು ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಮುಖ್ಯ ಅತಿಥಿ ಡಾ. ಬನಶಂಕರಿ ತಿ. ಗಿರಡ್ಡಿ ಮಾತನಾಡಿ ಮಧುಮೇಹ ಕಾಯಲೆಯು ಬಾಧಿಸದಂತೆ ಮಹಿಳೆಯರು ಎಚ್ಚರವಾಗಿರಬೇಕು. ಹೆಚ್ಚು ಒತ್ತಡಕ್ಕೆ ಒಳಗಾಗಬಾರದು ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಮಹಿಳೆಯರ ಬಿಪಿ ಮತ್ತು ಮಧುಮೇಹವನ್ನು ತಪಾಸಣೆ ಮಾಡಿದರು.
ಸನ್ಮಾನವನ್ನು ಸ್ವೀಕರಿಸಿದ ಕಾಳವ್ವ ಮಠಪತಿ ಸೋಬಾನ ಹಾಡುಗಳು ಹಾಗೂ ಜೋಕಾನಟ್ಟಿಯ ಅಕ್ಕಮಹಾದೇವಿ ಮಾದರ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನ ತಣಿಸಿದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಲಯನ್ಸ್ ಕ್ಲಬ್‍ವು ಕಳೆದ ಆರು ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮಾಡಿಕೊಂಡು ಬಂದಿದೆ ಎಂದರು.
ಬ್ರಹ್ಮಕುಮಾರಿ ಸವಿತಾ ಅಕ್ಕನವರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ, ಖಜಾಂಚಿ ಸುಪ್ರೀತ ಸೋನವಾಲಕರ ವೇದಿಕೆಯಲ್ಲಿದ್ದರು.
ಶ್ರೀನಿವಾಸ ಶಾಲೆಯ ಶಿಕ್ಷಕಿಯರಾದ ಚಂದ್ರಿಕಾ ನಾಯ್ಕ, ಕಾವ್ಯಾ ಮಡಿವಾಳ, ಪ್ರೇಮಾ ದಿನಕರ ಪ್ರಾರ್ಥಿಸಿದರು.
ಶಿವಾನಂದ ಕಿತ್ತೂರ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು.


Spread the love

About inmudalgi

Check Also

ಮಾರುತಿ ಕಮತಿ ನಿಧನ

Spread the love ಮಾರುತಿ ಕಮತಿ ನಿಧನ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ನಿವಾಸಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ