ಮೂಡಲಗಿ: ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದ ಮಕ್ಕಳ ದೈಹಿಕ ಬೆಳವಣಿಕೆಯ ಜೊತೆಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಲು ಸಾಧ್ಯವಾಗುವದು ಎಂದು ತಾಲೂಕಾ ಮದ್ಯಾಹ್ನ ಉಪಹಾರ ಯೋಜನೆಯ ಸಹನಿರ್ದೇಶಕ ಎ.ಬಿ ಮಲಬನ್ನವರ ಹೇಳಿದರು.
ಅವರು ಪಟ್ಟಣದ ವಿಜಯನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಹೆಸರು ಹೊಂದಲು ಶಿಕ್ಷಕರ, ಪಾಲಕರ, ವಿದ್ಯಾರ್ಥಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದೆ. ಮಕ್ಕಳಿಗೆ ಪೌಷ್ಠಿಕಾಂಶಯುಳ್ಳ ಆಹಾರದ ಜೊತೆಯಲ್ಲಿ ವಲಯಾದ್ಯಂತ ವಿಶೇಷ ಭೋಜನ ವ್ಯವಸ್ಥೆ ಮಾಡುತ್ತಿರುವದು ಮೆಚ್ಚುವಂತಹದು. ಕಲಿಕೆಗೆ ಪೂರಕವಾಗಿ ಗುಣಮಟ್ಟದ ಆಹಾರ ಮುಖ್ಯವಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ದಿಯಲ್ಲಿ ಪೌಷ್ಠಿಕ ಆಹಾರ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮೂಡಲಗಿ ಸಂಪನ್ಮೂಲ ವ್ಯಕ್ತಿ ಸಮೀರಅಹ್ಮದ ದಬಾಡಿ, ಮುಖ್ಯ ಗುರುಗಳಾದ ಎಸ್.ವಿ ಸೋಮವ್ವಗೋಳ, ಭಾರತಿ ದಾಸ್ತಿಕೊಪ್ಪ, ಮಗದುಮ, ಎಸ್.ಎಚ್ ಯಂಡ್ರಾವಿ, ಎಸ್.ಬಿ ಕಳ್ಳಿಗುದ್ದಿ, ಸುರೇಶ ಕೋಪರ್ಡೆ, ಶಿಕ್ಷಕರಾದ ಎಲ್.ಆರ್ ಲಮಾಣಿ, ಎಸ್.ಎಸ್ ಕಿತ್ತೂರ, ಶಶಿಕಲಾ ಕುಲಕರ್ಣಿ, ಎಸ್.ಎ ನಿಂಬರ್ಗಿ ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.