*ಅವರಾದಿಯಲ್ಲಿ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಿಸಾನ ಕಾಂಗ್ರೆಸ್‌ದಿಂದ ಪ್ರತಿಭಟನೆ*
ಮೂಡಲಗಿ: ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಜಿಲ್ಲಾ ಕಿಸಾನ ಕಾಂಗ್ರೆಸ ವತಿಯಿಂದ ಜಿಲ್ಲಾ ಕಿಸಾನ ಕಾಂಗ್ರೆಸ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಅವರ ನೇತೃತ್ವದಲ್ಲಿ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಉಟಗಿ ಅವರ ಪೆಟ್ರೋಲ್ ಪಂಪದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ ಅಧ್ಯಕ್ಷರಾದ ಕಲ್ಲಪ್ಪಗೌಡ ಲಕ್ಕಾರ ಮಾತನಾಡಿ, ಪಂಚರಾಜ್ಯಗಳ ಚುನಾವಣೆಗೋಸ್ಕರ ಬೆಲೆ ಕಡಿಮೆ ಮಾಡಿ ಮತ್ತೆ ಪೆಟ್ರೋಲ್, ಡಿಸೈಲ್ ಮತ್ತು ಅನಿಲ ಬೆಲೆಯನ್ನು ದಿನದಂದ ದನಕ್ಕೆ ಏರಿಕೆ ಮಾಡುತ್ತಿರುವುದು ಸರಿಲ್ಲ ಎಂದ ಅವರು ಕೇಂದ್ರ ಸರಕಾರ ವಿರುದ್ಧ ಹರಿಆಯ್ದ ಬೆಲೆ ಕಡಿಮೆ ಮಾಡದಿದಲ್ಲಿ ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕಾರ್ಯಧ್ಯಕ್ಷ ಭೀಮಶಿ ಕಾರದಗಿ ಮಾತನಾಡಿ, ರೈತರು, ಕಾರ್ಮಿಕರು, ಬಡವರು ಮತ್ತು ದುಡಿಯುವ ವರ್ಗವನ್ನು ಲೆಕ್ಕಿಸದೆ ಬೆಲೆಯನ್ನು ಹೆಚ್ಚಿಸಿ ಬದುಕಲಿಕ್ಕೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ ಅವರು ತಕ್ಷಣ ಬೆಲೆ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಅನೂಕಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಿಸಾನ್ ಉಪಾಧ್ಯಕ್ಷ ಕುಮಾರ ಕಾತರಕಿ, ಕಾರ್ಯಧ್ಯಕ್ಷ ರಮೇಶ ಮೋಕಾಶಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಗಮಣ್ಣ ಕಳಸಣ್ಣವರ, ಕೌಜಲಗಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಂಜು ಮಸಗುಪ್ಪಿ ಕೌಜಲಗಿ ಬ್ಲಾಕ ಕಿಸಾನ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಕರಿಗಾರ, ಕಾಂಗ್ರೆಸ್ ಮುಖಂಡರಾದ ಗುರಪ್ಪಸಾಹುಕಾರ ಊಟಗಿ, ಸಂಜು ಬಾಗಿ ಹಾಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರು ಇದ್ದರು