ಮೂಡಲಗಿ: ಕಂದಾಯ ಇಲಾಖೆ ಪತ್ರಿ ತಿಂಗಳ ಮೂರನೇ ಶನಿವಾರ ಆರಂಭಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಹಳ್ಳಿಯ ಜನರ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಸೂಚಿಸುವ ಕಾರ್ಯಕ್ರಮವಾಗಿದ್ದು, ಮೂಡಲಗಿ ತಾಲೂಕಿನಲ್ಲಿ ಹೆಸರಿಗೆ ಮಾತ್ರ ಕಾರ್ಯಕ್ರಮ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಾಪ್ಪ ಪೂಜೇರಿ ಆರೋಪಿಸಿದರು.
ರವಿವಾರದಂದು ಗುರ್ಲಾಪೂರ ಐಬಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಳ ನಡೆ-ಹಳ್ಳಿ ಕಡೆ ಯೋಜನೆಯ ಅನುಸಾರ ಜಿಲ್ಲಾಧಿಕಾರಿ ಅಥವಾ ಸ್ಥಳೀಯ ತಹಶೀಲ್ದಾರ ಒಂದು ಗ್ರಾಪಂಗೆ ಭೇಟಿ ನೀಡಿ ಅಲ್ಲಿನ ಹಳ್ಳಿಯ ಜನರ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಈ ಯೋಜನೆಯನ್ನು ಸರ್ಕಾರ ರೂಪಿಸಿದೆ. ಆದರೆ ಸ್ಥಳೀಯ ತಹಶೀಲ್ದಾರ ಡಿ ಜಿ ಮಹಾತ್ ಅವರು ಕಾರ್ಯಕ್ರವನ್ನು ಕಾಟಾಚಾರಕ್ಕಾಗಿ ಆಯೋಜಿಸಿ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾದೆ ಕಾರ್ಯಕ್ರಮವನ್ನು ಮಾಡಿತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಈ ತಿಂಗಳು ನಡೆಯುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಸ್ಥಳೀಯ ತಹಶೀಲ್ದಾರಗೆ ಎಚ್ಚರಿಕೆ ನೀಡಿದ ಅವರು, ತಾಲೂಕಿಗೆ ಬರಬೇಕಾದ ವಿವಿಧ ಇಲಾಖೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯಧ್ಯಕ್ಷ ಶ್ರೀಶೈಲ ಅಂಗಡಿ ಮಾತನಾಡಿ, ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯ ಕಾರ್ಖಾನೆಗಳು ಸನ್ 20-21ನೇ ಸಾಲಿನಲ್ಲಿ ಇರುವ 145 ರೂ, ಬಾಕಿ ಹಣ ಮತ್ತು 21-22ನೇ ಸಾಲಿನಲ್ಲಿ ಉಳಿದರುವ ಹಣವನ್ನು ಕೂಡಲೇ ಪಾವತಿ ಮಾಡಬೇಕೆಂದು. ಇಲ್ಲವಾರೆ ಮುಂದಿನ ದಿನಮಾನಗಳಲ್ಲಿ ಕಾರ್ಖಾನೆಗಳ ಎದುರಿಗೆ ಪ್ರತಿಭಟೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೆಳೆದ ಬೆಳೆಗೆ ದರ ಏರಿಕೆ ಮಾಡದೇ ತೈಲ ಬೆಲೆ ಏರಿಕೆ ಮಾಡುತ್ತಿರುವುದರಿಂದ ರೈತರು ಮತ್ತಷ್ಟು ಕಂಗಾಲಾಗುತ್ತಿದ್ದಾರೆ. ಸಣ್ಣ ವ್ಯಾಪಾರಸ್ಥರು, ಬಡ ಕುಟುಂಬಗಳ ಅನುಭವಿಸುತ್ತಿರುವ ಸಂಕಷ್ಟವನ್ನು ಜನಪ್ರತಿನಿಗಳು ಸದನದಲ್ಲಿ ಚರ್ಚಿಸುವ ಬದಲು ಕಾಲ ಹರಣ ಮಾಡುತ್ತಿರುವುದನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆ ಸರ್ಕಾರ ಆದೇಶದಂತೆ ರೈತರಿಗೆ ವಿದ್ಯುತ್ ಸಂಪರ್ಕವನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಈರಣ್ಣ ಸಸಾಲಟ್ಟಿ, ಪದಾಧಿಕಾರಿಗಳಾದ ಪದ್ಮನ್ ಉಂದ್ರಿ, ಗುರುನಾಥ ಹುಕ್ಕೇರಿ, ಪಾಂಡು ಬೀರನಗಡ್ಡಿ, ವಿವೇಕ ಸನದಿ, ರವೀಂದ್ರ ನುಚ್ಚುಂಡಿ, ವಾಸು ಪಂಡ್ರೋಳಿ, ಸಿದ್ದಾಪ್ಪ ಅಂಗಡಿ, ನಂದೆಪ್ಪ ನೇಸೂರ, ಶ್ರೀಶೈಲ ಮುರಾರಿ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.