Breaking News
Home / Recent Posts / 2023-24 ರ ವೇಳೆಗೆ ವಾರ್ಷಿಕ 15 ಮಿಲಿಯನ್ ಟನ್‍ನಷ್ಟು ಬಯೋ ಗ್ಯಾಸ್ ಉತ್ಪಾದನೆ

2023-24 ರ ವೇಳೆಗೆ ವಾರ್ಷಿಕ 15 ಮಿಲಿಯನ್ ಟನ್‍ನಷ್ಟು ಬಯೋ ಗ್ಯಾಸ್ ಉತ್ಪಾದನೆ

Spread the love

ಮೂಡಲಗಿ: ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ-2018ರ ಅನ್ವಯ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಉದ್ಯೋಗವನ್ನು ಸೃಷ್ಟಿಸುವುದು, ತ್ಯಾಜ್ಯ ನಿರ್ವಹಣೆ ಸೇರಿದಂತೆ ರೈತರಿಗೆ ಉತ್ತಮ ಸಂಭಾವನೆ ಉದ್ದೇಶಗಳೊಂದಿಗೆ ಜೈವಿಕ ಇಂಧನವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2025 ರ ವೇಳೆಗೆ ಶೇ 20% ರಷ್ಟು ಪೆಟ್ರೋಲ್‍ನಲ್ಲಿ ಎಥೆನಾಲ್ ಮಿಶ್ರಣ ಮತ್ತು ಡೀಸೆಲ್‍ನಲ್ಲಿ ಶೇ 5% ಜೈವಿಕ ಡೀಸೆಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಏ-04 ರಂದು ರಾಜ್ಯಸಭಾ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಶ್ನೋತ್ರ ವೇಳೆಯಲ್ಲಿ ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿ ಸಚಿವರು ಪ್ರಸ್ತುತ 2021-2022 ರಲ್ಲಿನ ತೈಲ ಮಾರುಕಟ್ಟೆ ಕಂಪನಿಗಳು 459 ಕೋಟಿ ಲೀಟರ್‍ಗಳ ಅವಶ್ಯತೆ ಕೊಡುಗೆಗಳ ಆಧಾರದ ಮೇಲೆ 416.33 ಕೋಟಿ ಲೀಟರ್‍ಗಳ ಖರೀದಿಗೆ ಬಿಡುಗಡೆ ಮಾಡಿದೆ. ಎಥೆನಾಲ್ ಸ್ಥಾವರಗಳಿಂದ ಕೊರತೆ ಇರುವ ರಾಜ್ಯಗಳಲ್ಲಿ ಬಳಸಿದ ಅಡುಗೆ ತೈಲವನ್ನು ಸಂಭಾವ್ಯ ಕಚ್ಚಾ ವಸ್ತುವೆಂದು ಗುರುತಿಸಲಾಗಿದೆ.
ದೇಶಾದ್ಯಂತ 5000 ಬಯೋ ಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಲಾಗಿದ್ದು, 2023-24 ರ ವೇಳೆಗೆ ವಾರ್ಷಿಕ 15 ಮಿಲಿಯನ್ ಟನ್‍ನಷ್ಟು ಬಯೋ ಗ್ಯಾಸ್ ಉತ್ಪಾದನೆಯನ್ನು ಅಂದಾಜಿಸಲಾಗಿದೆ. ಪ್ರಧಾನ ಮಂತ್ರಿ ಜೀವನ್  ಯೋಜನೆಯಡಿ 2018-19 ರಿಂದ 2023-24 ರ ಅವಧಿಗೆ 1969.50 ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದ್ದು. ನಾಲ್ಕು ಜೈವಿಕ ಎಥೆನಾಲ್ ಯೋಜನೆಗಳಿಗೆ ತಲಾ 150 ಕೋಟಿ ರೂ.ಗಳಲ್ಲಿ ಸ್ಥಾಪಿಸುವ ಯೋಜನೆಯನ್ನು ಅನುಮೋದಿಸಲಾಗಿದೆ ಎಂದು ಮಾನ್ಯ ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ