ಅದ್ದೂರಿಯಿಂದ ಜರುಗಿದ ಪಲ್ಲಕ್ಕಿ ಉತ್ಸವ
ಮೂಡಲಗಿ: ಭಾವೈಕ್ಯತೆಗೆ ಹಾಸರಾಗಿರುವ ಪಟ್ಟಣದ ಶ್ರೀ ಶಿವಭೋದರಂಗನ ಪಲ್ಲಕ್ಕಿ ಉತ್ಸವವೂ ಸಾವಿರಾರು ಭಕ್ತ ಸಮೂಹದಲ್ಲಿ ಬುಧವಾರ ಅತಿ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷ ದಂತೆ ನಡೆಯುವ ಶ್ರೀ ಶಿವಭೋದರಂಗನ ಪುಣ್ಯ ತೀಥಿ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಮಧ್ಯರಾತ್ರಿಯಿಂದ ಸಹಸ್ರಾರು ಭಕ್ತರು ಜಾತಿ ಬೇದವಿಲ್ಲದೇ ಬುಧವಾರ ಮುಂಜಾನೆಯವರೆಗೆ ಭಕ್ತಾಭಾವದಿಂದ ಧೀಘ೯ದಂಡ ನಮಸ್ಕಾರ ಹಾಕಿದರು.
ಮುಂಜಾನೆ ಪೀಠಾಧಿಪತಿಗಳಾದ ದತ್ತಾತ್ರೇಯ ಬೋಧ ಸ್ವಾಮೀಜಿಗಳು , ಶ್ರೀಧರ ಸ್ವಾಮೀಜಿಗಳು ನೇತೃತ್ವದಲ್ಲಿ ಮೇಲಿನ ಮಠದಿಂದ ವೇದ ಪಟಣಗಳೊಂದಿಗೆ ವಿಶೇಷ ಪೂಜೆ ಜರುಗಿತು.
ಮಧ್ಯಾಹ್ ಮೇಲಿನ ಮಠದಿಂದ ಶ್ರೀ ಶಿವಭೋದರಂಗನ ಪಲ್ಲಕಿಯು ವಿವಿಧ ವಾಧ್ಯಮೇಳದೊಂದಿಗೆ ಮೈನರಳಿಸುವ ನೃತ್ಯದ ಜೊತೆಗೆ ಯುವಕರು ಪರಸ್ಪರ ಗುಲಾಲ ಎರಚಿಕೊಂಡು ಶ್ರೀ ಶಿವಭೋದರಂಗ ಮಹಾರಾಜಕಿ ಜೈ ಎಂಬ ಘೋಷಣೆ ಕೂಗುತ್ತಾ ಬೀಸಿಲನ್ನು ಲೇಕಿಸದೇ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು.
ಪಲ್ಲಕಿಯ ಕೇಳಗಿನ ಮಠಕ್ಕೆ ಸಾಗಿದಂತೆ ನೆರೆದಿದ್ದ ಸಹಸ್ರಾರು ಭಕ್ತರು ಮಹಿಳೆಯರು, ಮಕ್ಕಳ, ಪಲ್ಲಕಿಯ ಮೇಲೆ ಬೆಂಡು ಬೇತ್ತಾಸ, ಕಾರಿಕ ಹಾಗೂ ಹೂ ಹಾರಿಸಿ ಕೃತಾಥ೯ರಾದರು. ನಂತರ ಭಕ್ತರಿಗೆ ಅನ್ನ ಪ್ರಸಾದ ಜರುಗಿತು.