ಜಾತ್ರಾ ಉತ್ಸವಗಳು ನಮ್ಮ ಭಾರತೀಯ ಪರಂಪರೆ, ಇತಿಹಾಸ ವನ್ನು ಬಿಂಬಿಸುತ್ರಿವೆ- ಕಹಾಮಾ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ರಾಜಾಪೂರ ಗ್ರಾಮ ದೇವತೆ ಹಾಗೂ ಚೂನಮ್ಮದೇವಿ ದರ್ಶಣ ಪಡೆದ-ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಜಾತ್ರಾ ಉತ್ಸವಗಳು ನಮ್ಮ ಭಾರತೀಯ ಪರಂಪರೆ, ಇತಿಹಾಸ ವನ್ನು ಬಿಂಬಿಸುತ್ರಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ ಹಾಗೂ ಚೂನಮ್ಮದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೊತೆಗೆ ಜಾತ್ರೆಗಳು ನಮ್ಮ ಸಾಂಸ್ಕøತಿಕ ರಾಯಭಾರಿಯಾಗಿವೆ ಎಂದು ಅವರು ತಿಳಿಸಿದರು.
ಗ್ರಾಮ ದೇವತೆ ಜಾತ್ರೆಗಳಲ್ಲಿ ಭಕ್ತರು ತಮ್ಮೆಲ್ಲ ಇμÁ್ಟರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಎಲ್ಲ ಜಾತಿ ಜನಾಂಗದವರು ಭಕ್ತಿ, ಶ್ರದ್ಧಾಪೂರ್ವಕವಾಗಿ ದೇವರಲ್ಲಿ ಹರಕೆ ಹೊರುತ್ತಾರೆ. ಈ ಗ್ರಾಮದಲ್ಲಿ ಗ್ರಾಮ ದೇವತೆಯ ಜತೆಗೆ ಚೂನಮ್ಮದೇವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ದೇವಿಯ ಶಕ್ತಿ ಪವಾಡ ತುಂಬ ಇದೆ. ಇಲ್ಲಿ ಎಲ್ಲರೂ ದೇವಿಯ ಆರಾಧಕರಾಗಿ ತಮ್ಮ ತಮ್ಮ ಕಾಯಕದಲ್ಲಿ ತೊಡಗಿ ಯಶಸ್ವಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜಾಪೂರ ಗ್ರಾಮಸ್ಥರು ಒಗ್ಗಟ್ಟಾಗಿ ಸರ್ಕಾರದ ಬಹುತೇಕ ಯೋಜನೆಗಳನ್ನು ಅನುμÁ್ಠನ ಮಾಡುತ್ತಿದ್ದಾರೆ. ಊರುಗಾರಿಕೆ ಮತ್ತು ಅಭಿವೃದ್ಧಿ ವಿಷಯಗಳು ಬಂದಾಗ ಇಲ್ಲಿನ ಮುಖಂಡರು ಪ್ರತಿ ಹಂತದಲ್ಲೂ ವ್ಯವಸ್ತಿತವಾಗಿ ಒಂದಾಗಿ ಗ್ರಾಮ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ನಾನು ಕೂಡ ಬಹಳ ದಿನಗಳ ನಂತರ ಈ ಜಾತ್ರೆಯಲ್ಲಿ ಭಾಗಿಯಾಗಿ ದೇವರ ದರ್ಶನ ಮಾಡಿರುವುದಕ್ಕೆ ಹರ್ಷವಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಜಾತ್ರಾ ಕಮೀಟಿಯವರು ಸತ್ಕರಿಸಿದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠಲ ಪಾಟೀಲ,ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಬಸವರಾಜ ಪಂಡ್ರೋಳ್ಳಿ, ಬೈರು ಯಕ್ಕುಂಡಿ, ರಾಮಚಂದ್ರ ಪಾಟೀಲ, ಶಿವಾನಂದ ಕಮತಿ, ಸಿದ್ದು ಯಕ್ಕುಂಡಿ, ಜಾತ್ರಾ ಕಮಿಟಿ ಪದಾಧಿಕಾರಿಗಳು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.