ಮೂಡಲಗಿ : ಬಾಗಲಕೋಟೆಯ ನ್ಯಾಯವಾದಿ ಸಂಗೀತಾ ಸಿಕ್ಕೇರಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳಲು ನಿರ್ಧರಿಸಿ ಸೋಮವಾರ ನ್ಯಾಯಾಲಯದ ಕಾರ್ಯಕಲಾಪದಿಂದ ದೂರ ಉಳಿದು ವಕೀಲರು ಪ್ರತಿಭಟಿಸಿದರು.
ದಿವಾಣಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ ಸಂಘದ ಅಧ್ಯಕ್ಷ ಎಸ್.ಎಸ್. ಗೋಡಿಗೌಡರ ಮಾತನಾಡಿ ಸಮಸ್ತ ವಕೀಲ ವೃತ್ತಿ ಬಾಂಧವರೆ ವಕೀಲ ಸಹೋದರಿ ಸಂಗೀತಾ ಅವರ ಮೇಲೆ ಸಾರ್ವಜನಿಕವಾಗಿ ನಡೆದ ದಾಳಿ ಹಾಗೂ ನಿಂದನೆಯ ಪ್ರಕರಣ ನಿಜಕ್ಕೂ ಖಂಡನೀಯ ನ್ಯಾಯಕ್ಕಾಗಿ ಸದಾ ಹೋರಾಡುವ ವಕೀಲರನ್ನು ಹೀಗೆ ನಡೆಸಿಕೊಳ್ಳುವ ಯಾರನ್ನೂ ಸುಮ್ಮನೇಬಿಡುವ ಮಾತೇ ಇಲ್ಲ ಎಂದರು
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಾಯ್. ಹೆಬ್ಬಾಳ ಮಾತನಾಡುತಾ ಕೇಂದ್ರ ಸರ್ಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಮತ್ತು ಈ ತರಹ ಆರೋಪಿಗಳ ಪರವಾಗಿ ಯಾರು ನ್ಯಾಯವಾದಿಗಳು ವಕಾಲತು ವಹಿಸದಿರಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದರು
ಸಂಘದ ಉಪಾಧ್ಯಕ್ಷ ಎಲ್.ಬಿ. ವಡೆಯರ ಸಹಕಾರ್ಯದರ್ಶಿ ಪಿ.ಎಸ್.ಮಲ್ಲಾಪೂರ ಖಜಾಂಚಿ ಎಸ್.ಎಮ್. ಗಿಡೊಜಿ ಹಿರಿಯ ವಕೀಲರಾದ ಎನ್.ಬಿ. ನೇಮಗೌಡರ, ಎಲ್.ವಾಯ್. ಅಡಿಹುಡಿ, ಎ.ಎಸ್. ಕೌಜಲಗಿ, ಬಿ.ಎಚ್. ಮಳ್ಳಿವಡೆರ, ಎಸ್.ವಾಯ್. ಹೊಸಟ್ಟಿ ,ಎಸ್.ಎಲ್. ಪಾಟೀಲ್, ಆರ್.ಬಿ. ಮಮದಾಪೂರ, ಎ.ಎಸ್.ಆನಿಖಿಂಡಿ, ಆರ್.ಆರ್. ಕವಲ್ದಾರ, ವಿ.ಕೆ.ಪಾಟೀಲ್, ಆರ್.ಎಮ್. ಐಹೋಳಿ, ಎಸ್.ವಾಯ್.ಖಾನಟ್ಟಿ ಮತ್ತು ಹಿರಿಯ ವಕೀಲರು ಪ್ರತಿಭಟನೇಯಲ್ಲಿ ಭಾಗವಹಿಸಿದರು
